Input license here

ಇತ್ತೀಚಿನ ಪೋಸ್ಟ್‌ಗಳು

ಮನಸಿನಾಳಕಿಳಿದು ನಿಂತ ಶಾಂತ ಮಧುರ ದನಿಗಳೇ

ಮನಸಿನಾಳಕಿಳಿದು ನಿಂತ ಶಾಂತ ಮಧುರ ದನಿಗಳೇ
ಕಾಲ ಜಲದ ತಳಕಿಳಿದು ಮಿನುಗುತಿರುವ ಮಣಿಗಳೇ
ಹೇಗೆ ಅಲ್ಲಿಗಿಳಿದಿರಿ ಯಾಕೆ ಅಲ್ಲೆ ಉಳಿದಿರಿ
ಎಂದೂ ಮರೆಯಲಾಗದಂತೆ ಹಾಗೆ ಹೇಗೆ ಇರುವಿರಿ

ಆದುದೆಲ್ಲ ಮುಗಿಯಿತೆಂಬ ಮಾತು ಬರಿ ಸುಳ್ಳು
ಈಗಿರುವುದೆ ನಿಜವೆನ್ನುವ ಮಾತು ಸಹ ಸುಳ್ಳು
ಭಾವವೊಂದೆ ಸತ್ಯ ಕಾಲ ಪರಿಮಿತ್ಯ
ನಿಜವಾದುದೆ ಎಲ್ಲ ಕಾಲವುಳಿಯುವಂತ ನಿತ್ಯ

ಸ್ನೇಹ ಪ್ರೀತಿ ಇದ್ದ ಜೀವ ಹೇಗೆ ಬದಿಗೆ ಸರಿವುದು
ದೇಹ ಮರೆಗೆ ಸರಿದರು ನೆನಪು ಹೇಗೆ ಅಳಿವುದು
ಎದುರಿಗಿರುವ ಏನೇನು ಕಸ ಮನಸಿಗೆ ಬಾರದು
ಆಗಿ ಹೋದ ರಸ ಘಳಿಗೆ ಸದಾ ಮನವನಾಳ್ವುದು
 

-ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟ

 

Post a Comment

0 Comments