ಇಲ್ಲೆ ಇರು ಅಲ್ಲಿ ಹೋಗಿ
ಮಲ್ಲಿಗೆಯನು ತರುವೆನು
ನೇಹಕೆಂದು ನಲುಮೆಗೊಂದು
ಗುರುತನ್ನಿರಿಸಿ ಬರುವೆನು
ಹೋದ ಮೇಲೆ ಸುತ್ತ ಬೇಕು
ಏಳು ಕೋಟೆ ದ್ವಾರವು
ಹಾದಿಯಲ್ಲಿ ತೀರದಂತ
ದುಖಃವಿಹುದಪಾರವು
ಸಾಧಿಸುತ್ತ ಜೈಸುವುದೆ
ಬಾಳುವುದರ ಸಾರವು
ನವಗ್ರಹಗಳ ನಾಡ ದಾಟಿ
ಮುಗಿಲ ಗಡಿಯ ಮೀರಿಯು
ದಿಕ್ಕು ತಪ್ಪು ತಳೆವ
ತಾರೆಗಳಿಗೆ ದಾರಿ ತೋರಿಯು
ಕತ್ತಲಿದ್ದ ತಾಣದಲ್ಲಿ
ಎದೆಯ ಬೆಳಕ ಬೀರಿಯು
ಕೋಟಿ ವರುಷದಾಚೆ
ಜನಿಸಿದಂತ ಜೀವದಾಸೆಯು
ತೀರಬಹುದು ಇಂಗಬಹುದು
ಅಂದಿನಾ ಪಿಪಾಸೆಯು
ಇಂದೆ ರುಚಿರವಾಗಬಹುದು
ನನ್ನ ದೈವರೇಶೆಯು
0 Comments