Input license here

ಇತ್ತೀಚಿನ ಪೋಸ್ಟ್‌ಗಳು

ಹಾಸಿಗೆ ಇದ್ದಷ್ಟು ಕಾಲು ಚಾಚು

                     1)ಹಾಸಿಗೆ ಇದ್ದಷ್ಟು ಕಾಲು ಚಾಚು

ಗಾದೆಗಳು ವೇದಗಳಿಗೆ ಸಮಾನ ,ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳುಹಿರಿಯರ ಅನುಭವದ ನುಡಿಮುತ್ತುಗಳು.ಗಾದೆಗು ನಮ್ಮ ಬಾಳಿಗೆ ಮಾರ್ಗದರ್ಶನ ನೀಡಿ ನಮ್ಮ ಬಾಳನ್ನು ಹಸನುಗೊಳಿಸುತ್ತವೆ,ಅಂತಹ ಅಮೂಲ್ಯವಾದ ಗಾದೆ ಮಾತುಗಳಲ್ಲಿ ಮೇಲಿ ಗಾದೆಯೂ ಒಂದಾಗಿದೆ.

ಮೇಲಿನ ಗಾದೆ ಮಾತು ಜೀವನದ ಇತಿಮತಿಯನ್ನು ಸೂಚಿಸುತ್ತದೆ. ಹಾಸಿಗೆ ಅಳತೆಗೆ ತಕ್ಕಂತೆ ಕಾಲು ಚಾಚಿ ಮಲಗಬೇಕು,ಇಲ್ಲವಾದರೆ ಕಾಲು ಹಾಸಿಗೆಯಿಂದ ಆಚೆ ಬಂದು ಎಲ ಮುಟ್ಟಿ ಶೀತ ಬಾಧೆ ಬಂದೀತು. ಹಾಗಾಗಿ ಹಾಸಿಗೆ ಅಷ್ಟು ಉದ್ದವಿಲ್ಲದಿದ್ದರೆ,ಮೊಟಕಾಗಿದ್ದರೆ ಕಾಲನ್ನು ಮಡಚಿಕೊಳ್ಳುತ್ತೇವೆ. ಹಾಗೇಯೆ ನಮ್ಮ ಮಿತಿಯನ್ನು ಅರಿತು ಬಾಳಬೇಕು.ಯಾವುದೇ ಕೆಲಸಕ್ಕೆ ಕೈ ಹಾಕಿದರೂ ನಮ್ಮ ಶಕ್ತಿ,ಸಾಮರ್ಥ್ಯ,ಸೌಕರ್ಯಗಳನ್ನು ಗಮನಿಸಬೇಕು,ಅದಕ್ಕೆ ತಕ್ಕಂತೆ ಖರ್ಚು ಮಾಡಬೇಕು.ಆದಾಯ ಕಡಿಮೆ ಖರ್ಚು ಅತಿಯಾದರೆ ಜೀವನದಲ್ಲಿ ನಾವೇ ಸಂಕಟ ಪಡಬೇಕಾಗುತ್ತದೆ.ದುಃಖ,ಗೊಂದಲ ನಮ್ಮನ್ನು ಅವಲಂಬಿಸಿರುವವರಿಗೂ ಸಮಸ್ಯೆಗುಂಟಾಗುತ್ತವೆ.

ಬುದ್ಧ ಹೇಳುವಂತೆ ಆಸೆಯೇ ದುಃಖಕ್ಕೆ ಮೂಲ;ಆಸೆಯ ನಾಶವೇ ಸಂತೋಷದ ಮೂಲವಾಗಿದೆ.ಆದ್ದರಿಂದ ಇರುವುದರಲ್ಲಿ ತೃಪ್ತಿರವಾದ,ಆರೋಗ್ಯವಾದ ಜೀವನವನ್ನು ನಡೆಸಬೇಕು.ಮಿತಿಯನ್ನು ಅರಿತು ಬಾಳು ಎಂಬುದು ಮೇಲಿನ ಗಾದೆ ಮಾತಿನ ಸಂದೇಶವಾಗಿದೆ.

Post a Comment

0 Comments