ಕೈ ಕಸರಾದರೆ ಬಾಯಿ ಮೊಸರು
ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ . ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು . ಗಾದೆಗಳು ನಮ್ಮ ಬಾಳಿಗೆ ಮಾಗದರ್ಶನ ನೀಡಿ ನಮ್ಮ ಬಾಳನ್ನು ಹಸನು ಗೊಳಿಸುತ್ತವೆ. ಅಂತಹ ಅಮೂಲ್ಯವಾದ ಗಾದೆ ಮಾತುಗಳಲ್ಲಿ ಮೇಲಿ ಗಾದೆಯೂ ಒಂದಾಗಿದೆ.
ಈ ಗಾದೆಯ ಮಾತಿನ ಅರ್ಥವೆಂದರೆ ಕಷ್ಟ ಪಟ್ಟರೆ ಸುಖ ಎಂಬುದನ್ನು ಸೂಚಿಸುತ್ತದೆ. ಕನಕದಾಸರು ''ಎಲ್ಲಾರು ಮಾಡುವುಡು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ'' ಪ್ರತಿಯೊಬ್ಬರೂ ಜೀವನೋಪಾಯಕ್ಕಾಗಿ ಒಂದೊಂದು ಕೆಲಸವನ್ನು ಅವಲಂಬಿಸಬೇಕಾಗುತ್ತದೆ. ಉಳುವ ಕೆಲಸವನ್ನು ರೈತರು, ನೆಯ್ಯುವ ಕಾರ್ಯವನ್ನು ನೇಕಾರರು ಹೀಗೆ ಪ್ರತಿಯೊಬ್ಬರು ತಮ್ಮ ತಮ್ಮ ಜೀವನ ನಿರ್ವಹಣೆಗೆ ಒಂದೊಂದು ಕೆಲಸವನ್ನು ಮಾಡುವಾಗಾ ಕೆಲಸದಲ್ಲಿ ಪ್ರತಿಫಲ ಇರುವ ಹಾಗೆಯೇ ಸಾಕಷ್ಟು ಕಷ್ಟ ನಷ್ಟಗಳೂ ಇರುತ್ತವೆ. ಆದರೆ ಕಷ್ಟಗಳು ಬರುವವೆಂದು ಕೆಲಸ ಮಾಡದೇ ಬದುಕಲಾಗದು. ಕೈ ಕೆಸರಾಗುವುದೆಂದು ರೈತ ಬೆಳೆಯನ್ನು ಬೆಳೆಯದಿರಾದೀತೇ? ಬೆಳೆ ಇಲ್ಲದೆ ಊಟ ಮಾಡುವುದು ಹೇಗೆ? ರೈತ ಕೈ ಕೆಸರನ್ನುಗಮನಿಸದೇ ಮುಂದೆ ಸಿಗುವ ಪ್ರತಿಫಲದ ನಿರೀಕ್ಷೆಯು ಅವನನ್ನು ಕಷ್ಟ ಪಡಲು ಪ್ರೇರೇಪಿಸುತ್ತದೆ. ಬಸವಣ್ಣನವರು ಹೇಳುವಂತೆ ಕಾಯಕವೇ ಕೈಲಾಸವಾಗಿದೆ. ಪರಿಶ್ರನದಿಂದ ಮಾತ್ರವೇ ವಿದ್ಯೆ ಎಂದು ಸಂತ ಕಬೀರದಾಸರು ಹೇಳಿದ್ದಾರೆ.
ದುಡಿತವೇ ದುಡ್ಡಿನ ತಾಯಿ ಆದ್ದರಿಂದ ಪ್ರತಿಯೊಬ್ಬರೂ ಕಷ್ಟಪಟ್ಟು ದುಡಿಯಬೇಕು. ಉದ್ಯೋಗಿಯಾದರೆ ಮಾತ್ರ ಸಂಪತ್ತು ದೊರೆಯಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ತಮ್ಮ ಕಾರ್ಯವನ್ನು ನಿಷ್ಠೆಯಿಂದ ಮಾಡಿದರೆ ಫಲ ದೊರೆಯಲು ಸಾಧ್ಯ.
0 Comments