ಒಗಟುಗಳು
ಹಳದಿ ತಾಯಿಗೆ ಕೆಂಪು ಮುತ್ತಿನ ಮಕ್ಕಳು
*ದಾಳಿಂಬೆ
ಹಸಿರು ಸಿಪಾಯಿಗೆ ಬೆಳ್ಳಿಯ ಟೋಪಿ
*ಹುರುಳಿಹೂವು
ಮರಿಗಳ ರಾಣಿ ಮುಟ್ಟಿದರೆ ಉರಿ ಉರಿ
*ಚೇಳು
ಭೂಮಿಲಿ ಅಡಗಿದ್ದ ಬೆಳ್ಳಿಯ ದೊರೆ
*ಮೂಲಂಗಿ
ಬೆಳ್ಳಿ ಗೋಡೆ ಒಳಗೆ ಹಳದಿ ಸಾಮ್ರಾಜ್ಯ
*ಮೊಟ್ಟೆ
ದಡೋಟಿ ಅಸಾಮಿ ದಿನ್ನೆ ಹತ್ತಲಾರ
*ಕುಂಬಳ
ಕತ್ತಲಲ್ಲೂ ಬೆಳಕು ನೀಡುವ ರಾಣಿ
*ಮಿಂಚುಹುಳ
ಬಣ್ಣದ ಎಲೆ ಬಂಗಾರದ ಎಲೆ ಬಡವ ಬಲ್ಲಿದನಿಗೂ ಬೇಕಾದ ಎಲೆ
*ರೂಪಾಯಿ ನೋಟು
ಅನ್ನ ಮಾಡಲಿಕ್ಕೆ ಬಾರದಂತಹ ಅಕ್ಕಿ ಯಾವುದು
*ಏಲಕ್ಕಿ
0 Comments