ಪ್ರಧಾನ ಪಾತ್ರದಲ್ಲಿ ಮೇಘವರ್ಣನೆಂಬ ಕಾಗೆಗಳ ರಾಜ ಮತ್ತು ಅರಿಮರ್ದನ ಎಂಬ ಗೂಬೆ ಕಂಡುಬರುತ್ತದೆ.ಯುದ್ಧ ನೈಪುಣ್ಯ ಹಾಗೂ ಶಾಂತಿಯ ಮಹತ್ವವನ್ನು ಸಹಜ ವೈರಿಗಳೆನಿಸಿದ ಕಾಗೆಗಳು ಮತ್ತು ಗೂಬೆಗಳನ್ನೊಳಗೊಂಡ ಕತೆಗಳ ಮೂಲಕ ವಿವರಿಸಲಾಗಿದೆ.
ಇಲ್ಲಿ ಬಡಪಾಯಿಗಳೆನಿಸಿದ ಕಾಗೆಗಳೇ , ಬಲಶಾಲಿಗಳಾದ ಗೂಬೆಗಳ ರಹಸ್ಯವನ್ನು ಅವುಗಳ ಇತಿಮಿತಿಗಳನ್ನರಿತುಕೊಂಡು ಹೇಗೆ ಜಯಿಸುತ್ತವೆ ಎಂಬುದನ್ನು. ಕಾಗೆಗಳು ದುರ್ಬಲವಾದವೂ, ಒಳ್ಳೆಯ ನಡತೆವುಳ್ಳವೂ , ಚಿಕ್ಕ ಗುಂಪಿಗೆ ಸೇರಲ್ಪಟ್ಟ ಪಕ್ಷಿಗಳಾಗಿಯೂ ಕಂಡುಬರುತ್ತವೆ. ಇದು ದಿನದಲ್ಲಿ ಕಂಡುಬರುವ ಪಕ್ಷಿಯಾಗಿದ್ದರಿಂದ ಬಹುಶಃ ಒಳ್ಳೆಯತನ ಎಂಬುದಕ್ಕೆ ನಿದರ್ಶನವಾಗಿದೆ.
ಗೂಬೆಗಳು ಬಲಶಾಲಿಗಳಾಗಿದ್ದು ಕೆಟ್ಟನಡತೆಯನ್ನು ಮೈಗೂಡಿಸಿಕೊಂಡಿದ್ದು, ದೊಡ್ಡ ಗುಂಪನ್ನು ಒಳಗೊಂಡಿರುತ್ತವೆ. ರಾತ್ರಿಯಲ್ಲಿ ತಿರುಗಾಡುವ ಇವುಕೆಟ್ಟತನವನ್ನು ಪ್ರತಿನಿಧಿಸುತ್ತವೆ.
ಕಾಗೆ ಚಿರಂಜೀವಿಯ ಜಾಣೆಯ ನುಡಿಯಿಂದ ಜಯಗಳಿಸಿದರೆ, ಗೂಬೆ ರಕ್ತಾಕ್ಷನ ಮಾತನ್ನು ತಿರಸ್ಕರಿಸಿ ನಾಶಹೊಂದುತ್ತದೆ.
ಒಮ್ಮೆ ಶತ್ರುವಾಗಿದ್ದವನು ನಂತರದ ಸಂದರ್ಭದಲ್ಲಿ ಪ್ರಿಯಮಿತ್ರನಾಗಿ ಮಾರ್ಪಟ್ಟಿದ್ದರೂ... ಅವನನ್ನು ಎಂದೂ ನಂಬಲೇಬಾರದೆಂಬುದನ್ನು ಸಮರ್ಥಿಸಲು ಗೂಬೆಗಳ ಗೂಡನ್ನು ಕಾಗೆಗಳು ಸುಟ್ಟುಹಾಕಿದ ಈ ಕಥೆ ಉದಾಹರಿಸಲ್ಪಟ್ಟಿದೆ. ಇಲ್ಲಿ ಹದಿನೇಳು ಉಪಕಥೆಗಳಿವೆ.
0 Comments