ನಡುಗುತಿದೆ ಎದೆಗೂಡು
ಸುಡುಗಾಡು ಬರಿ ಮೌನ
ತೆವಳುತಿದೆ ವಾತ್ಸಲ್ಯ
ಬರೀ ಮೋಸ ದ್ವೇಷ ಇದೆ ಜಮಾನಾ
ಬದುಕು ನೋವನ್ನು ಮಾರುವ ತಾಣ
ಒತ್ತೆ ಇಡು ಇಲ್ಲಿ ನಿನ್ನ ತನವನ
ಹೊತ್ತು ಅಲೆದಾಡು ನಿನ್ನ ನೆನಪನ್ನ
ನಿಲಬೇಡ ನೀ
ಕತ್ತಿ ಮಸೆಯುತಾರೆ ಅನುಮಾನವೇಕೆ
ಸುರಿದು ಹೋದ ರಕ್ತಕಿಲ್ಲಿ ಅಳತೆ ಯಾಕೆ
ಹರಿದ ದಾರಿ ಹೊಲಿದು ತೇಪೆ ಹಾಕಬೇಕೆ
ನೆನ್ನೆಯಲೆ ನಾಳೆ ಇದೆ ಹುಡುಕು ಮಂಕೇ
ಇಡೀ ಮನುಕುಲ
ಇಂತ ದುಷ್ಟತನಕೆ ನಲುಗಿದೆ
ಯುಗ ಮುಗಿದರೂ
ದ್ವೇಷಕೆ ಉಳಿಯುವಂತ ಬಲವಿದೆ
ನೀನು ಅತ್ತರೆ ನಗುವ ಜಗಕೆ ಇಲ್ಲ ಯಾವ ಯಾತನೆ
ಒಮ್ಮೆ ನಿನ್ನನ್ನು ಮುರಿದು ಕಟ್ಟು ನಿನಗೆ ನೀನೇ ಪ್ರೇರಣೆ
ನೀ ಸಿಡಿದು ನಿಂತಾಗ ದುಷ್ಟರಿಗೆ ಏರುವುದು ಎದೆ ಬಡಿತ
ಹಾ ಹಾ
ಕತ್ತಿ ಮಸೆಯುತಾರೆ ಅನುಮಾನವೇಕೆ
ಸುರಿದು ಹೋದ ರಕ್ತ ಕಿಲ್ಲಿ ಅಳತೆ ಯಾಕೆ
ಹರಿದ ದಾರಿ ಹೊಲಿದು ತೇಪೆ ಹಾಕಬೇಕೆ
ನೆನ್ನೆಯಲೆ ನಾಳೆ ಇದೆ ಹುಡುಕು ಮಂಕೇ
Watch YouTube video
0 Comments