ಮುಖ್ಯ ಪಾತ್ರದಲ್ಲಿ ಚಿತ್ರಗ್ರೀವ ಎಂಬ ಹೆಸರಿನ ಪಾರಿವಾಳ , ಲಘುಪತನಕ ಎಂಬ ಕಾಗೆ , ಹಿರಣ್ಯಕ ಎಂಬ ಇಲಿ , ಮಂಥರಕ ಎಂಬ ಆಮೆ , ಚಿತ್ರಾಂಗ ಎಂಬ ಜಿಂಕೆ ಕಂಡುಬರುತ್ತವೆ.
ಪ್ರಾರಂಭದಲ್ಲಿ ಬರುವ ಕಾಗೆ ಮತ್ತು ಇಲಿಯ ಮಿತ್ರತ್ವ , ಮುಂದಿನ ಆಮೆ , ಜಿಂಕೆಯ ಗೆಳೆತನ ಇತ್ಯಾದಿಗಳು ಗೆಳೆತನದ ಮಹತ್ವವನ್ನು , ಒಗ್ಗಟ್ಟಿನ ಬಲವನ್ನು , ಸಂಘಟನೆಯ ಶಕ್ತಿಯನ್ನು ಎತ್ತಿ ಹಿಡಿಯುತ್ತದೆ . ಈ ಪ್ರಾಣಿಗಳು , ಆಪತ್ಕಾಲದಲ್ಲಿ ಒಂದಕ್ಕೊಂದು ಸ್ಪಂದಿಸುತ್ತಾ , ಮಾನವರಿಗೂ ಈ ತತ್ವವನ್ನು ಉಪದೇಶಿಸುತ್ತವೆ.
ಮಿತ್ರಲಾಭ ಅಥವಾ ಮಿತ್ರಸಂಪ್ರಾಪ್ತಿಯ ಈ ಭಾಗ ಬೇರೆ ಭೇದಗಳಿಗಿಂತ ಅತ್ಯಂತ ಭಿನ್ನಸ್ವರೂಪದ್ದಾಗಿದೆ. ಇಲ್ಲಿನ ಪ್ರಾಣಿಗಳ ಗೆಳೆತನವೇ ಅಪರೂಪವೆಂದೆನಿಸದಿರದು.
ಕಾಗೆ, ಆಕಾಶಗಾಮಿಯಾದರೆ ಇಲಿ ಭೂಮಿಯನ್ನು ಕೊರೆದು ಬಿಲದಲ್ಲಿ ವಾಸಿಸುವಂತಹುದು . ನಿಧಾನಗತಿಯ ಪ್ರಾಣಿ ಆಮೆ ನೀರಿನಲ್ಲಿ ವಾಸಿಸಿದರೆ, ಜಿಂಕೆ ಭೂಮಿಯ ಮೇಲಿದ್ದು, ಸ್ವತಃ ತಾನು ಹುಲ್ಲನ್ನು ತಿನ್ನುತ್ತಾ ಬೇರೆ ಪ್ರಾಣಿಗಳ ಆಹಾರವೆನಿಸಿದೆ.
ಬೇರೆ ಬೇರೆ ಪರಿಸರದಲ್ಲಿ ಬದುಕುವ ಈ ಜೀವಿಗಳಲ್ಲಿ ಒಂದೊಂದೂ ವಿಭಿನ್ನ ಸಾಹಸಕಾರ್ಯದಲ್ಲಿ ತೊಡಗುತ್ತವೆ. ದುರ್ಬಲ ಪ್ರಾಣಿಗಳೂ ತಮ್ಮ ಕೌಶಲ್ಯದಿಂದ ಚಾಣಾಕ್ಷತನದಿಂದ ಕಾರ್ಯವನ್ನು ಹೇಗೆ ಸಾಧಿ ಸಬಹುದೆಂಬುದಕ್ಕೆ ಇವು ಉದಾಹರಣೆಗಳಾಗಿವೆ. ಈ ತಂತ್ರದಲ್ಲಿ ಆರು ಉಪಕಥೆಗಳಿವೆ.
0 Comments