Input license here

ಇತ್ತೀಚಿನ ಪೋಸ್ಟ್‌ಗಳು

ಅರೆರೆ ಶುರುವಾಯಿತು ಹೇಗೆ ( ಜಂಟಲ್ಮನ್ ಚಲನಚಿತ್ರ)

 

ಅರೆರೆ ಶುರುವಾಯಿತು ಹೇಗೆ
ಪದವೇ ಸಿಗದಾಯಿತು ಹೇಗೆ
ಹೃದಯ ಕಳುವಾಯಿತು ಹೇಗೆ
ಒಂದು ಮಾತು ಆಡದೆ
ಮೊದಲೆ ಬೆಳಗಾಯಿತು ಹೇಗೆ
ಕನಸೆ ಎದುರಾಯಿತು ಹೇಗೆ
ಋತುವೆ ಬದಲಾಯಿತು ಹೇಗೆ
ಹಿಂದೆ ಮುಂದೆ ನೋಡದೆ

ಕಣ್ಣಲ್ಲೆ ನೂರು ಮಾತು ಆಡುತ ಮುಂದೆ ಕೂತು
ಜೀವದಲ್ಲಿ ಚಾಪು ಹೀಗೆ ಬೀರಿಲ್ಲ ಇನ್ಯಾರು
ಆಗಿದೆ ಜೀವ ಹೂವು ಆದರೂ ಏನೋ ನೋವು
ಭಾವಗಳ ಕಾಟ ಹೀಗೆ ನೀಡಿಲ್ಲ ಇನ್ಯಾರು
ಆಗಿದೆ ಜೀವ ಹೂವು ಆದರೂ ಏನೋ ನೋವು
ಭಾವಗಳ ಕಾಟ ಹೀಗೆ ನೀಡಿಲ್ಲ ಇನ್ಯಾರು

ತಂಗಾಳಿ ಬೀಸುವಾಗ ಎಲ್ಲೆಲ್ಲೂ ನಿಂದೆ ಮಾದರಿ
ಗುಟ್ಟಾಗಿ ಕೂಡಿಸಿಟ್ಟ ಈ ಪ್ರೀತಿ ಒಂದೆ ಠೇವಣಿ
ನೀ ಎಲ್ಲೇ ಇದ್ದರು ಅಂತರಂಗದಿ ಚಿತ್ರ ಮೂಡಿದೆ
ಈ ಜೀವ ನಿನ್ನನು ಸಂತೆಯಲ್ಲಿಯು ಪತ್ತೆ ಮಾಡಿದೆ
ನಾ ಹೇಗೆ ಇರಲಿ ಹೇಳು ನೀ ಮುದ್ದು ಮಾಡದೆ

ಕಣ್ಣಲ್ಲೇ ನೂರು ಮಾತು ಆಡುತ ಮುಂದೆ ಕೂತು
ಜೀವದಲ್ಲಿ ಚಾಪು ಹೀಗೆ ಬೀರಿಲ್ಲ ಇನ್ಯಾರು
ಜೀವ ಹೂವು ಏನೋ ನೋವು
ಭಾವಗಳ ಕಾಟ ಹೀಗೆ ನೀಡಿಲ್ಲ ಇನ್ಯಾರು
 

Watch YouTube video

Post a Comment

0 Comments