Input license here

ಇತ್ತೀಚಿನ ಪೋಸ್ಟ್‌ಗಳು

ಅಸಮೀಕ್ಷಕಾರಿತ್ವ

 

ಹಿಂದೆ ಮುಂದೆ ಆಲೋಚಿಸದೆ ಮಾಡಿದಂಥ ಕಾರ್ಯಗಳು ಹೇಗೆ ಅನರ್ಥಕಾರಕವೆಂಬುದನ್ನು ಬ್ರಾಹ್ಮಣೀ ಹಾಗೂ ಅವಳು  ಸಾಕಿದ ಮುಂಗುಸಿಯ ಕಥೆಯ ಮೂಲಕ ಪರಿಚಯಿಸಲಾಗಿದೆ.

ಮುಂಗುಸಿಯು ಬ್ರಾಹಣಿಯ ಮಗುವನ್ನು ರಕ್ಷಿಸಿದಾಗ್ಯೂ ಅದನ್ನು ಗುರುತಿಸದ ಅವಳು ಮುಂಗುಸಿಯನ್ನು ಕೊಂದು ಆಮೇಲೆ ಪಶ್ಚಾತ್ತಾಪ ಪಡುವ ಸಂದರ್ಭವನ್ನು ಇದು ವಿವರಿಸುತ್ತದೆ.

ನಾಲ್ಕನೇ ಭಾಗದಂತೆ ಕೊನೆಯ ಈ ಅಸಮೀಕ್ಷಕಾರಿತ್ವ ಎಂಬ ಭಾಗದಲ್ಲೂ ಏನನ್ನು ಮಾಡಬಾರದೆಂಬುದನ್ನೇ ಪ್ರಧಾನವಾಗಿ ಸೂಚಿಸಿದಂತಿದೆ. ಸತ್ಯಶೋಧನೆ , ತಾಳ್ಮೆ , ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳ ಕೆಟ್ಟ ಪರಿಣಾಮ, ಗಾಳಿಗೋಪುರವನ್ನು ನಿರ್ಮಿಸಬಾರದೆಂಬ ತತ್ವಾದಿಗಳು ಎತ್ತಿ ಹಿಡಿಯಲ್ಪಟ್ಟಿವೆ.

ಹಿಂದಿನ ಭೇದಗಳಲ್ಲಿ ಹೆಚ್ಚಾಗಿ ಪ್ರಾಣಿಗಳೇ ಪಾತ್ರವರ್ಗದಲ್ಲಿ ಕಂಡುಬಂದರೆ ಇಲ್ಲಿನ ಭಾಗದಲ್ಲಿ ಮಾನವರೇ ಹೆಚ್ಚಾಗಿ ಕಂಡುಬರುತ್ತಾರೆ. ಇಲ್ಲಿ ಹದಿನಾಲ್ಕು ಉಪಕಥೆಗಳಿವೆ.

Post a Comment

0 Comments