ಅರಳುತಿರು ಜೀವದ ಗೆಳೆಯ
ಸ್ನೇಹದಾ ಸಿಂಚನದಲ್ಲಿ
ಬಾಡದಿರು ಸ್ನೇಹದ ಹೂವೇ
ಪ್ರೇಮದಾ ಬಂಧನದಲ್ಲಿ
ಮನಸಲ್ಲೇ ಇರಲಿ ಭಾವನೆ
ಮಿಡಿಯುತಿರಲಿ ಮೌನ
ವೀಣೆ ಹೀಗೇ ಸುಮ್ಮನೆ
ಹಕ್ಕಿಯು ಹಾಡಿದೆ
ತನ್ನ ಹೆಸರನು ಹೇಳದೇ
ಸಂಪಿಗೆ ಬೀರಿದೆ ಕಂಪನು
ಯಾರಿಗೂ ಕೇಳದೇ
ಬೀಸುವ ಗಾಳಿಯ ಹಕ್ಕಿಯ
ಹಾಡಿನ ನಂಟಿಗೆ ಹೆಸರಿನ ಹೊಂಗಿಲ್ಲ
ನಮಗೇಕೆ ಅದರ ಯೋಚನೆ
ಬೇಡ ಗೆಳೆಯ ನಂಟಿಗೆ
ಹೆಸರು ಯಾಕೆ ಸುಮ್ಮನೆ
ಮಾತಿಗೆ ಮೀರಿದ ಭಾವದ
ಸೆಳತವೇ ಸುಂದರ
ನಲುಮೆಯು ತುಂಬಿದ
ಮನಸಿಗೆ ಬಾರದು ಬೇಸರ
ಬಾಳ ದಾರಿಯಲಿ ಬೇರೆಯಾದರು
ಚಂದಿರ ಬರುವನು ನಮ್ಮ ಜ್ಯೊತೆ
ಕಾಣುವೆನು ಅವನಲಿ ನಿನ್ನನೇ
ಇರಲಿ ಗೆಳೆಯ ಈ
ಅನುಬಂಧ ಹೀಗೇ ಸುಮ್ಮನೆ..
Watch YouTube video
0 Comments