Input license here

ಇತ್ತೀಚಿನ ಪೋಸ್ಟ್‌ಗಳು

ಒಂದೇ ಏಟಿಗೆ ( ಅಮರ್ ಚಲನಚಿತ್ರ)

 

ಒಂದೇ ಏಟಿಗೆ ಕೊಂದೆ ಬಿಟ್ಟಳು
ಮುಲಾಜೆ ಇರದಂತೆ ನನ್ನನ್ನ
ಚೂಪಾದ ಕಣ್ಣೊ ನ್ದು ಆಗಾಗ ಚುಚ್ಚೋದು
ಹೃದಯಕ್ಕೆ ನುಸುಳೋದು ಹಾಯಾಗಿದೆ
ಮೊದಲನೇ ಪ್ರೀತಿ ನನದು
ಮೊದಲನೇ ನೋಟ ನಿನದು
ಮೊದಲನೇ ಹುಚ್ಚು ನನಗೆ ಹೀಗೆ
ಒಂದೇ ಏಟಿಗೆ ಕೊಂದೆ ಬಿಟ್ಟಳು
ಮುಲಾಜೆ ಇರದಂತೆ ನನ್ನನ್ನ

ನಿನ್ನ ಹೆಜ್ಜೆಗೆ ಕಾವಲುಗಾರ
ನಿನ್ನ ಸೇವೆಗೆ ನಾ ನೌಕರ
ನಿನ್ನ ಬದುಕಿಗೆ ನಾ ಜೊತೆಗಾರ
ಇರಲಿ ನಾನೆಲ್ಲೇ ಗಮನ ನಿನ್ನಲ್ಲೇ
ಈ ನಿನ್ನ ಬೆರಳನ್ನು ಮೆಲುವಾಗಿ ನಾ ಹಿಡಿದು
ಭೂಮಿನ ಸುತ್ತೋಕೆ ಮನಸಾಗಿದೆ

ಮೊದಲನೇ ಪ್ರೀತಿ ನನದು
ಮೊದಲನೇ ನೋಟ ನಿನದು
ಮೊದಲನೇ ಹುಚ್ಚು ನನಗೆ ಹೀಗೆ

ನಿನ್ನ ತೋಳಲಿ ತುಂಬಿಕೊ ನನ್ನ
ಮುಗಿದೋಗಲಿ ಈ ಜೀವನ
ನಿನ್ನ ಬೆಚ್ಚನೆ ಅಪ್ಪುಗೆಯಲ್ಲಿ
ಅರಿತೆ ನಾನಿಂದು ಖುಷಿಯೇ ನೀನೆಂದು
ಒಂದೊಂದು ಮಳೆಹನಿಗೆ ಮುತ್ತಿಟ್ಟು ನನ್ನ ಬಳಿಗೆ
ಕಳಿಸೋದು ನೀನಂತ ಅನಿಸುತ್ತಿದೆ

ಮೊದಲನೇ ಪ್ರೀತಿ ನನದು
ಮೊದಲನೇ ನೋಟ ನಿನದು
ಮೊದಲನೇ ಹುಚ್ಚು ನನಗೆ ಹೀಗೆ

 Watch YouTube video

Post a Comment

0 Comments