ಅಂಗಳದಲಿ ಹೂ ಅರಳಲಿ, ಈ ಜೀವಕೆ ನೀ ಜ್ಞಾಪಕ
ನಡುರಾತ್ರಿಯ ನೀರವದಲಿ, ಈ ಹೃದಯಕೆ ನೀ ಜ್ಞಾಪಕ
ಮರೆಯೋದು ಸಾಧ್ಯವೇ
ಮೊದಲ ಆ ಪ್ರೀತಿಯಾ?
ಎದೆ ಗೂಡಲಿ ನೆನಪೆಲ್ಲವೂ ಜೋಪಾನವಾಗಿದೆ
ಅಂಗಳದಲಿ ಹೂ ಅರಳಲಿ, ಈ ಜೀವಕೆ ನೀ ಜ್ಞಾಪಕ
ಅಲೆ ಅಲೆ ಈ ಎದೆಯಲಿ ಅಲೆಯೋದೆ ಸದಾ ನೀನು
ಪದೇ ಪದೇ ಮೆಲ್ಲನೆ ಜೀವ ಗುನುಗುವ ಪದ ನೀನು
ನೀ ಅಳಿಸಲು ಆಗದ ಗುರುತು ಕಣೋ
ನೀ ಮರೆತರು ಮರೆಯದ ನೆನಪು ಕಣೇ
ನಿಂಗಿಂತ ಹೆಚ್ಚು ನಂಗೆ ನೀನು ಪರಿಚಿತನು
ಪರಿಚಿತನು
ನೀ ಪರಿಚಿತನು
ಅಂಗಳದಲಿ ಹೂ ಅರಳಲಿ, ಈ ಜೀವಕೆ ನೀ ಜ್ಞಾಪಕ
ನಿನ್ ಹೆಸರನು ಬರೆವುದು ಖುಷಿ ನೀನು
ದಿನ ದಿನ ನನ್ನೊಳಗೇನೆ ಸುರಿಯುವ ಮಳೆ ನೀನು
ನೀ ಎದುರಿನ ತಿರುವಲ್ಲಿ ಸಿಗಬಹುದು
ಈ ಬಯಕೆಯೇ ನನ್ನನು ನಡೆಸುವುದು
ನಾ ಇನ್ನು ಸೋಲದಂತೆ ಹೇಗೆ ತಡೆಯುವುದು
ತಡೆಯುವುದು
ತಡೆಯುವುದು
ಅಂಗಳದಲಿ ಹೂ ಅರಳಲಿ ಈ ಜೀವಕೆ ನೀ ಜ್ಞಾಪಕ
Watch YouTube video
0 Comments