Input license here

ಇತ್ತೀಚಿನ ಪೋಸ್ಟ್‌ಗಳು

ಆಸೆಯು ಕೈಗೂಡಿತು ( ನಾನೊಬ್ಬ ಕಳ್ಳ ಚಲನಚಿತ್ರ)

 

ಹೆ:   ಆಸೆಯು ಕೈಗೂಡಿತು ಆಸರೆ ದೊರೆತಾಯಿತು
       ಚಿಂತೆ ದೂರವಾಯಿತು ಮನಸು ಹಗುರವಾಯಿತು
       ನಿನ್ನೊಡನೆ ಸ್ನೇಹದಾಸೆ ಒಂದಾಗಿ ಬಾಳುವಾಸೆ ।೨।
       ಇನ್ನೇನು ಕೇಳೆ ನಿನ್ನ ನನ್ನಾಣೆ ನಂಬು ನಿನ್ನ  
       ಆಸೆಯು ಕೈಗೂಡಿತು ಆಸರೆ ದೊರೆತಾಯಿತು

ಗಂ: ಕಂದಾ ಎಂದು ಅತ್ತಾಗ ಯಾರು ಕಾಣದಾದಾಗ
       ಸಂತೈಸಲೆಂದು ಓಡೋಡಿ ಬರುವ ತಾಯಂತೆ ನೀನು ಬಂದೆ
       ಗಾಳಿ ಬೀಸಿ ಬಂದಾಗ, ಜ್ಯೋತಿ ಹೆದರಿ ಹೋದಾಗ
       ಆ ದೀಪದಲ್ಲಿ ನೀ ಜೀವವಾಗಿ ಹೋರಾಡಲೆಂದು ಬಂದೆ
       ತೇಲಾಡುವಾಸೆ ತಂದೆ

ಗಂ: ಆಸೆಯು ಕೈಗೂಡಿತು
ಹೆ:   ಆಸರೆ ದೊರೆತಾಯಿತು
ಗಂ: ಚಿಂತೆ ದೂರವಾಯಿತು
ಜೊ:  ಮನಸು ಹಗುರವಾಯಿತು

ಹೆ:   ನೀನೇ ನನ್ನ ಸಂತೋಷ, ನೀನೇ ನನ್ನ ಸೌಭಾಗ್ಯ
        ನಿನ್ನಿಂದ ನಾನು ನಿನಗಾಗಿ ನಾನು ನಿನ್ನಲ್ಲೆ ಸೇರಿಹೋದೆ
ಗಂ:  ಬಾಳೋ ಆಸೆ ನೀ ತಂದೆ ನನ್ನಾ ಸೇರಿ ಒಂದಾದೆ
        ಸುಳಿಯಲ್ಲಿ ನಾನು ಹೋರಾಡುವಾಗ ಜೊತೆಯಾಗಿ ನೀನು ಬಂದೆ
         ಇನ್ನೇನು ಕಾಣೆ ಮುಂದೆ

ಹೆ:   ಆಸೆಯು ಕೈಗೂಡಿತು ಆಸರೆ ದೊರೆತಾಯಿತು
       ಚಿಂತೆ ದೂರವಾಯಿತು ಮನಸು ಹಗುರವಾಯಿತು
ಗಂ:  ನಿನ್ನೊಡನೆ ಸ್ನೇಹದಾಸೆ ಒಂದಾಗಿ ಬಾಳುವಾಸೆ ।೨।
       ಇನ್ನೇನು ಕೇಳೆ ನಿನ್ನ ನನ್ನಾಣೆ ನಂಬು ನಿನ್ನ
       ಆಸೆಯು ಕೈಗೂಡಿತು
ಹೆ:   ಆಸರೆ ದೊರೆತಾಯಿತು
ಗಂ: ಚಿಂತೆ ದೂರವಾಯಿತು
ಹೆ:   ಮನಸು ಹಗುರವಾಯಿತು
ಜೊ:  ಮನಸು ಹಗುರವಾಯಿತು ।೩।

  Watch YouTube video

Post a Comment

0 Comments