Input license here

ಇತ್ತೀಚಿನ ಪೋಸ್ಟ್‌ಗಳು

ಆಹಾ ಈ ಬೆದರು ( ಗಾಳಿಪಟ ಚಲಚಿತ್ರ )

ಹೆ :ಆಹಾ ಈ ಬೆದರು ಬೊಂಬೆಗೆ ಜೀವ ಬಂದಿರುವ ಹಾಗಿದೆ

ಗ೦:ಹೆ ಹೆ ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ

ಹೆ :ನೆನಪಿನ ಜಾತ್ರೆಯಲಿ ಅಲಿದು ನಾ ಕನಸಿನ ಕನ್ನಡಿಯ ಕೊಳ್ಳಲೆ

ಗ೦:ನಿನ್ನಯ ದಾರಿಯಲಿ ಅಂದಿನ ಹೃದಯದ ಅಂಗಡಿಯ ತೆರೆಯಲೆ

ಹೆ :ಕೆನ್ನೆಯ ಗುಳಿಯೆ ನಿನ್ನ ಕೀರುತಿಯೆ

ಗ೦:ಮುಂಗೋಪವೇನು ನಿನ್ನ ಮೂಗುತಿಯೆ

ಹೆ :ಸೂರ್ಯನ ಮುಖದಲ್ಲಿ ಮೀಸೆಯ ಬರೆಯುವೆಯ

ಗ೦:ಚಂದ್ರನ ಕರೆದಿಲ್ಲಿ ದೋಸೆಯ ತಿನಿಸುವೆಯ

ಹೆ :ಹುಟ್ಟೊ ದಿಲ್ಲಿಯಲಿ ಮನಸ ತಲುಪೆವೆಯ

ಗ೦:ಓ ಕಳೆದು ಹೋಗಿರುವೆ ದಾರಿ ತಿಳಿಸುವೆಯ

ಹೆ :ಆಹಾ ಈ ಬೆದರು ಬೊಂಬೆಗೆ ಜೀವ ಬಂದಿರುವ ಹಾಗಿದೆ

ಗ೦:ಹೆ ಹೆ ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ

ಗ೦:ಪ್ರೀತೀಗೆ ಯಾಕೆ ಈ ಉಪವಾಸ

ಹೆ :ಯಾತಕ್ಕು ಇರಲಿ ನಿನ್ನ ಸಹವಾಸ

ಗ೦:ಅಂಚೆಯ ಪೆಟ್ಟಿಗೆಗೆ ಹೃದಯವ ಹಾಕಿರುವೆ

ಹೆ :ನೆನಪಿನ ಕೊಟ್ಟಿಗೆಗೆ ನಿನ್ನನ್ನೆ ನೂಕಿರುವೆ

ಗ೦:ನಂಬಿ ಕೆಟ್ಟಿರುವೆ ಏನು ಪರಿಹಾರ

ಹೆ :ನಿನಗೆ ಕಟ್ಟಿರುವೆ ಮನದ ಗಡಿಯಾರ

ಹೆ :ಆಹಾ ಈ ಬೆದರು ಬೊಂಬೆಗೆ ಜೀವ ಬಂದಿರುವ ಹಾಗಿದೆ

ಗ೦:ಹೆ ಹೆ ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ

ಹೆ :ನೆನಪಿನ ಜಾತ್ರೆಯಲಿ ಅಲಿದು ನಾ ಕನಸಿನ ಕನ್ನಡಿಯ ಕೊಳ್ಳಲೆ

ಗ೦:ನಿನ್ನಯ ದಾರಿಯಲಿ ಅಂದಿನ ಹೃದಯದ ಅಂಗಡಿಯ ತೆರೆಯಲೆ
 
Watch YouTube video

Post a Comment

0 Comments