Input license here

ಇತ್ತೀಚಿನ ಪೋಸ್ಟ್‌ಗಳು

ಶಿವಪ್ಪ ಕಾಯೋ ತಂದೆ ( ಬೇಡರ ಕಣ್ಣಪ್ಪ ಚಲನಚಿತ್ರ)

ಶರಣು ಶಂಕರ ಶಂಭೋ
ಓಂಕಾರನಾದ ರೂಪಾ
ಮೊರೆಯ ನೀ ಆಲಿಸಿ..
ಪಾಲಿಸೋ ಸರ್ವೇಶಾ..

ಶಿವಪ್ಪ ಕಾಯೋ ತಂದೆ
ಮೂರು ಲೋಕ ಸ್ವಾಮಿ ದೇವ
ಹಸಿವೆಯನ್ನು ತಾಳಲಾರೆ
ಕಾಪಾಡೆಯ ಹರನೇ ಕಾಪಾಡೆಯ

ಭಕ್ತಿಯಂತೆ ಪೂಜೆಯಂತೆ
ಒಂದು ಅರಿಯೆ ನಾ
ಪಾಪವಂತೆ ಪುಣ್ಯವಂತೆ
ಕಾಣೆನಯ್ಯ ನಾ
ಪಾಪವಂತೆ ಪುಣ್ಯವಂತೆ
ಕಾಣೆನಯ್ಯ ನಾ ಹರನೇ

ಶುದ್ದನಾಗಿ ಪೂಜೆಗೈಯ
ಒಲಿಯುವಂತೆ ನೀ
ಶುದ್ದವೊ ಅಶುದ್ದವೊ
ನಾ ಕಾಣೆ ದೇವನೆ
ನಾದವಂತೆ ವೇದವಂತೆ
ಒಂದು ತಿಳಿಯೆ ನಾ
ಬೆಂದ ಜೀವ ನೊಂದು
ಕೂಗೆ ಒಂದು ನೋಡೆಯಾ

ಏಕಚಿತ್ತದಿ ನಂಬಿದವರ
ನೀ ಸಾಕಿ ಸಲಹುವೆ ಎಂತಪ್ಪಾ
ಶೋಕವ ಹರಿಸುವ
ದೇವ ನೀನಾದರೆ
ಬೇಟೆಯ ತೋರೊ ಎನ್ನಪ್ಪಾ
ಲೋಕವನಾಳುವ ನೀನಪ್ಪಾ
ಬೇಟೆಯ ತೋರೊ ಎನ್ನಪ್ಪಾ
ಲೋಕವನಾಳುವ ನೀನಪ್ಪಾ

 Watch YouTube video

Post a Comment

0 Comments