ದೇವರೇ ನೀನು ಇರೋ
ವಿಳಾಸವು ಬೇಕಾಗಿದೆ
ಆಗಿರೋ ಅನ್ಯಾಯಕೆ
ದೂರೊಂದನು ನೀಡೋದಿದೆ

ಆಧಾರದ ದಾರ ಈಗ ದೂರ
ಕಾರಣವೂ ಯಾರೋ ಸೂತ್ರಧಾರ
ಗೊತ್ತಾಗದೆ ಗುಟ್ಟಾಗಿದೇ

ದೇವರೇ ನೀನೆ ಬಾ
ಕಾರಣ ನೀಡು ಬಾ
ದೇವರೇ ಬೇಗ ಬಾ
ಉತ್ತರ ನೀಡು ಬಾ
ದೇವರೇ ನೀನು ಇರೋ
ವಿಳಾಸವು ಬೇಕಾಗಿದೆ

ಕಾಯಲು ಹೋದೇನು
ನಿನ್ನನು ನಂಬಿ ದೇಶವ
ಕಾಯದೇ ಸಾಥೆಯ ನನಗೆ
ಬೇಕಾಧ ಒಂದು ಜೀವವ

ಮರಳಲ್ಲಿ ನನಗೆ ನಾ
ಗೂಡೊಂದು ಕಟ್ಟಿದೆ
ಮಳೆ ತಂದು ಅಳಿಸಿ ನೀ
ಮರೆಯಾಗಿ ಒಡೀದೇ
ಈ ಮೋಸಕೆ ನೀನೆ ಹೊಣೆ
ಈಗಾಗಲಿ ವಿಚಾರಣೆ

ದೇವರೇ ನೀನೆ ಬಾ
ಕಾರಣ ನೀಡು ಬಾ
ದೇವರೇ ಬೇಗ ಬಾ
ಉತ್ತರ ನೀಡು ಬಾ
ದೇವರೇ ನೀನು ಇರೋ
ವಿಳಾಸವು ಬೇಕಾಗಿದೆ

  Watch YouTube video