Input license here

ಇತ್ತೀಚಿನ ಪೋಸ್ಟ್‌ಗಳು

ಅಂತೂ ಇಂತೂ ( ಮಿಲನ ಚಲನಚಿತ್ರ)

 

ಅಂತೂ ಇಂತೂ ಪ್ರೀತಿ ಬಂತು

ಇಂದು ನವಿರಾದ ಮಳೆಬಿಲ್ಲಿನಂತೆ

ಒಂದು ಸೊಗಸಾದ ಸವಿ ಸೊಲ್ಲಿನಂತೆ

ಮನಸೋತೆ ಮನಸಾರೆ

ನನ್ನ ಹೊಸ ಲೋಕ ನಿನ್ನಲ್ಲಿ ಈಗ

ಮನತುಂಬಿ ಮನಸೂರೆ

ಸರಿ ಮುಂದೇನು ನೀ ಹೇಳು ಬೇಗ

ಅಂತೂ ಇಂತೂ ಪ್ರೀತಿ ಬಂತು

ಒಂದು ಸೊಗಸಾದ ಸವಿ ಸೊಲ್ಲಿನಂತೆ

 

ಕಾಣದ ನಾಡಲ್ಲಿ ಕೇಳದ ಊರಲ್ಲಿ

ಕೈಹಿಡಿದು ಹೋಗೋಣ ಕಳೆದು

ನಾನಿನ್ನನು ನೀನನ್ನನು

ಹುಡುಕೋಣ ಖುಷಿಯಲ್ಲಿ ಅಲೆದು

ಇದ್ದಾಗ ಸಂಗಾತ ಮುದ್ದಾದ ಸಂಗೀತ

ಇನ್ನ್ಯಾವ ದನಿ ಕೇಳದಲ್ಲ

ನಮ್ಮೊಲವಲಿ ನಾವಿಬ್ಬರೇ

ಜಗದಲ್ಲಿ ಬೇರಾರು ಇಲ್ಲ

ಅಂತೂ ಇಂತೂ ಪ್ರೀತಿ ಬಂತು

ಒಂದು ಸೊಗಸಾದ ಸವಿ ಸೊಲ್ಲಿನಂತೆ

ಅಂತೂ ಇಂತೂ ಪ್ರೀತಿ ಬಂತು

ಇಂದು ನವಿರಾದ ಮಳೆಬಿಲ್ಲಿನಂತೆ

 

ನೀ ಕೈಗೆ ಸಿಕ್ಕಾಗ ಕಣ್ಣಲ್ಲೇ ನಕ್ಕಾಗ

ಹೃದಯ ಹೂ ಬಿಡುವ ಕಾಲ

ಸುಳಿವಿಲ್ಲದೆ ಸುಳಿದಾಡುತ

ಸೆರೆ ಹಿಡಿಯುವ ಮೋಹ ಜಾಲ

ನೋಡುತ್ತಾ ದಂಗಾಗಿ ಉನ್ಮತ್ತದುಂಗಾಗಿ

ದಯವಿಟ್ಟು ನೀ ನನ್ನ ಕಾಡು

ನಿನ್ನುಸಿರಲೇ ನಾ ಕೇಳುವೆ

ನನ್ನೆದೆಯ ಇಂಪಾದ ಹಾಡು

ಅಂತೂ ಇಂತೂ ಪ್ರೀತಿ ಬಂತು

ಇಂದು ನವಿರಾದ ಮಳೆಬಿಲ್ಲಿನಂತೆ

ಅಂತೂ ಇಂತೂ ಪ್ರೀತಿ ಬಂತು

ಒಂದು ಸೊಗಸಾದ ಸವಿ ಸೊಲ್ಲಿನಂತೆ

 Watch YouTube video

Post a Comment

0 Comments