Input license here

ಇತ್ತೀಚಿನ ಪೋಸ್ಟ್‌ಗಳು

ಕೂಡಿ ಇಟ್ಟ (ಸಂತು ಸ್ಟ್ರೈಟ್ ಫಾರ್ವರ್ಡ್ ಚಲನಚಿತ್ರ)

 

ಹೆಣ್ಣು : ಕೂಡಿ ಇಟ್ಟ ಕನಸಿನೊಡೆಯ ಕಣ್ಣ ಮುಂದೆ ಬಂದ ಸಮಯ
ನೋಡೋ ಮಿಂಚೋ ಕಂಗಳ ಏನೋ ಹೇಳೋ ಹಂಬಲ
ನನ್ನ ಲೋಕ ತುಂಬಿ ಪುಳಕ ನಿಂದೆ ಸಪ್ಪಳ
ಗಂಡು : ಮೋಹ ಮೂಡಿದಾಗ ಮೋಡಕೆ ಹೊತ್ತು ಗೊತ್ತು ಹೋಗಿ ಪಕ್ಕಕೆ ಮಳೆಯ ಚುಂಬನ ಸಾಗರಕೆ
ಇಷ್ಟ ಆದ ಮೇಲೆ ಹೃದಯಕೆ ಅಸ್ತು ಅನ್ನು ಅಷ್ಟೇ ಪ್ರೇಮಕೆ ಬೇಡ ಯಾವುದೇ ಹಿಂಜರಿಕೆ.

ಗಂಡು : ಬೀಳುವಾಗ ನೀನು ಹೀಗೆ ಕಣ್ಣಿಗೆ ಕೆಂಡಕಾರೋ ಸೂರ್ಯ ಕೂಡ ತಣ್ಣಗೆ
ಹೆಣ್ಣು : ಹೃದಯದ ಸಿಹಿ ಪರಿಚಯ ಕಿರು ಬೆರಳಲಿ ಮಾಡುತ ಕಂಡಲಿ ಕಚಗುಳಿ ಇಡು ನಿನ್ನ ಶೈಲಿ ಅಧ್ಭುತ
ಗಂಡು : ಜೇನಿನ ಜಾತ್ರೆಗೆ ಬಂದಾಗ ಆಸೆಗೆ ಏತಕೆ ಬೀಗ
ಹೆಣ್ಣು : ಎಲ್ಲೋ ಒಮ್ಮೆ ಕೋಟಿ ವರುಷಕೆ ಇಂತ ಮೈತ್ರಿ ಸಾಧ್ಯ ಹರುಷಕೆ ಬಂತು ಜೀವಕೆ ಲವಲವಿಕೆ
ಈಗಲೂನು ಬರದ ನಂಬಿಕೆ ಸಿದ್ದ ಮಾಡಿ ಮುತ್ತು ವೇದಿಕೆ ಹೀಗೆ ಬಂದ ನೀ ಹತ್ತಿರಕೆ.
ಹೆಣ್ಣು : ಸಂಧಿಸೋಕೆ ಕೊಟ್ಟರೆ ನಾ ಸಮ್ಮತಿ ಬಂಧಿಸೋದು ಯಾವ ಸೀಮೆ ಪದ್ಧತಿ
ಗಂಡು : ಬಯಕೆಯ ಬರಸಿಡಿಲನು ತಡೆಹಿಡಿಯಲು ಸಾಧ್ಯವೇ ಮಿಲನದ ಹೊಸ ಲೋಕಕೆ ನಯನಗಳೆ ಸೇತುವೆ
ಹೆಣ್ಣು : ಜೀವನ ಲಕ್ಷಣ ನೀ ಬಂದು ಪ್ರೀತಿಸು ಹೀಗೆ ನೀ ಎಂದೂ
ಗಂಡು : ಮೀನಮೇಷ ಏಕೇ ಸುಮ್ಮನೆ ನನ್ನ ತೋಳೇ ನಿನ್ನ ಅರಮನೆ ಬಾಳು ಬೆಚ್ಚಗೆ ನನ್ನೊಡನೆ
ಹೇಳಬಲ್ಲೆ ಮಾಡಿ ಘರ್ಜನೆ ನಿನ್ನ ಪ್ರೀತಿ ನನ್ನ ಸಾಧನೆ ನೀನೆ ಮೊದಲು ನೀ ನನ್ನ ಕೊನೆ.

  Watch YouTube video

Post a Comment

0 Comments