ಅಂತೂ ಇಂತೂ ಹೃದಯಕೆ ಒಂದು ಒಳ್ಳೆ ಕೆಲಸ ಸಿಕ್ಕಿದೆ ಇಂದು ಅಪರೂಪದ ಅಧ್ಬುತ ಒಂದು ಅಪ್ಸರೆ ರೂಪದಿ ಎದುರು ಬಂದು
ಅಂತೂ ಇಂತೂ ಹೃದಯಕೆ ಒಂದು ಒಳ್ಳೆ ಕೆಲಸ ಸಿಕ್ಕಿದೆ ಇಂದು ಅಪರೂಪದ ಅಧ್ಬುತ ಒಂದು ಅಪ್ಸರೆ ರೂಪದಿ ಎದುರು ಬಂದು
ಅಲ್ಲಿಂದ ಇಲ್ಲಿತನಕ ಆಗಿಹುದು ಪ್ರೀತಿ ಹಿಂಗೇ ಗೊತ್ತಿಲ್ಲ ನಂಗೂ ಕೂಡ ಇಲ್ಲಿಂದ ಮುಂದೆ ಹೆಂಗೆ
ಬಾರೆ ಪ್ರೀತಿ ಮಾಡುವ ಕಮ್ ಕಮ್ ಕಮ್ ಬಲಗಾಲಿಟ್ಟು
ಚೂ ಚೂರೇ ಮುಂದುವರೆಯುವ ಕ್ಲಿಯರ್ ಆಯ್ತು ಎಲ್ಲ ರೂಟು
ಅಂತೂ ಇಂತೂ ಹೃದಯಕೆ ಒಂದು ಒಳ್ಳೆ ಕೆಲಸ ಸಿಕ್ಕಿದೆ ಇಂದು ಅಪರೂಪದ ಅಧ್ಬುತ ಒಂದು ಅಪ್ಸರೆ ರೂಪದಿ ಎದುರು ಬಂದು.
ಸಲ್ಯೂಟು ಚಿನ್ನ ನಿನ್ನ ಬ್ಯುಟಿಗೆ ಕ್ರೆಡಿಟ್ಟು ನಿನ್ನ ತಂದೆ ತಾಯಿಗೆ
ನಿಂಗೆ ಜನ್ಮ ಕೊಟ್ಟರು ನನ್ನ ಕಣ್ಣ ಮುಂದೆ ಬಿಟ್ಟರು
ಸೆಲೆಕ್ಟು ಆದೆ ನನ್ನ ಲವ್ವಿಗೆ ಮ್ಯಾಜಿಕ್ಕು ನಿಂಗೆ ಈ ಗುಂಡಿಗೆ
ಈಗ ಎಲ್ಲೇ ಹೋದರು ನಿಂದೆ ಹ್ಯಾಂಗೂ ಓವರು
ಆದ ಮೇಲೆ ನಿಂಜೊತೆ ಕನೆಕ್ಟು ಇಂಥ ಸ್ಪೆಷಲ್ ಎಫ್ಫೆಕ್ಟು
ಕೀಲಿ ಹಾಕಿ ಇಟ್ಟ ಖಾಲಿ ಹಾರ್ಟಿನಲ್ಲಿ ದಾಳಿ ಮಾಡಿರುವೆ ಗೋಲಿ ಆಡಿರುವೆ
ಬಾರೆ ಪ್ರೀತಿ ಮಾಡುವ ಲವ್ ಡಬ್ ಲವ್ ಅನ್ನೋ ಹಾರ್ಟು
ಚೂ ಚೂರೇ ಮುಂದುವರೆಯುವ ಲವ್ವ ಲವ್ವ ಲವ್ವ ಅಂದಗಾಯ್ತು
ಅಂತೂ ಇಂತೂ ಹೃದಯಕೆ ಒಂದು ಒಳ್ಳೆ ಕೆಲಸ ಸಿಕ್ಕಿದೆ ಇಂದು ಅಪರೂಪದ ಅಧ್ಬುತ ಒಂದು ಅಪ್ಸರೆ ರೂಪದಿ ಎದುರು…..
ಕಮಿಟ್ಟು ಆದ್ರೆ ಒಮ್ಮೆ ಲವ್ವಿಗೆ ಜಗತ್ತೇ ಬ್ಯೂಟಿಫುಲ್ಲು ಕಣ್ಣಿಗೆ ಪ್ರೇಮಿ ಮುಂದೆ ದೇವರೇ ಸ್ವರ್ಗ ಕೂಡ ಚಿಲ್ಲರೆ
ಲಗಾಮು ಇಲ್ಲವಲ್ಲ ಮನಸಿಗೆ ಗುಲಾಮ ಆಗೇ ಬಿಟ್ಟೆ ಕನಸಿಗೆ ಹೆಚ್ಚಿ ಹೋಗಿ ಅಕ್ಕರೆ ಊಟ ನಿದ್ದೆ ಕಣ್ಮರೆ
ಹಾಡುತಾ ಸಾಗುವ ಮೆಲ್ಲಗೆ ಕೇಳಲೇ ಬೇಡ ನೀ ಎಲ್ಲಿಗೆ ಪ್ರೇಮಲೋಕದಲ್ಲಿ ರಾಜರೋಷವಾಗಿ ಬೀಟು ಹಾಕುವ ಡೇಟು ಮಾಡುವ
ಬಾ ರೇ ಪ್ರೀ ತಿ ಮಾಡುವ ಡುಂ ಡುಂ ಡುಂ ಮದುವೆ ಡೇಟು
ಚೂ ಚೂರೇ ಮುಂದುವರೆಯುವ ಫಿಕ್ಸ್ ಮಾಡಿ ಯಾಕೆ ಲೇಟು
ಅಂತೂ ಇಂತೂ ಹೃದಯಕೆ ಒಂದು ಒಳ್ಳೆ ಕೆಲಸ ಸಿಕ್ಕಿದೆ ಇಂದು ಅಪರೂಪದ ಅಧ್ಬುತ ಒಂದು ಅಪ್ಸರೆ ರೂಪದಿ ಎದುರು ಬಂದು.
Watch YouTube video
0 Comments