Input license here

ಇತ್ತೀಚಿನ ಪೋಸ್ಟ್‌ಗಳು

ಆಕಾಶದ ಕನ್ನಡಿ ( ಲೈಫ್ ಜೊತೆ ಒಂದ್ ಸೆಲ್ಪಿ ಚಲನಚಿತ್ರ )

 

ಆಕಾಶದ ಕನ್ನಡಿ ಕಡಲು
ತುಂಡಾಗಿ ಹಾರಿದೆ ಮುಗಿಲು
ಅಲ್ಲೂ ನೀಲಿ ಇಲ್ಲೂ ನೀಲಿ
ಆದರೂ ಏನೋ ಖಾಲಿ ಖಾಲಿ

ಆಕಾಶವ ತಬ್ಬಿದೆ ಕಡಲು
ಈ ಕಾರಣ ಸಾಲದೇ ನಗಲು
ಎಂಥ ಶೈಲಿ ಬಂತು ತೇಲಿ
ಕಾಮನ ಬಿಲ್ಲು ವಾಲಿ ವಾಲಿ

ನೀಡುತ ಉಸಿನು ಸಾಲ
ಎಲ್ಲಿಗೊ ಹೊರಟಿದೆ ಗಾಳಿ
ಕೈಯ್ಯಲಿ ನೆನಪಿನ ಚೀಲ
ಸುಮ್ಮನೆ ಸಾರುವ ಚಾಳಿ

ದಾರಿಗೆ ಹೆಜ್ಜೆಯ ಸ್ನೇಹ
ಹೇಳು ಎಲ್ಲಿಯ ತನಕ
ದೂರವು ತುಂಬ ಸನಿಹ
ಭರವಸೆ ಇರುವ ತನಕ

ಎದೆಯಲಿ ಬಿಟ್ಟುಹೋದ ಗುರುತು
ನೆನೆದರೆ ಮತ್ತೆ ಮತ್ತೆ ಹೊಸತು
ಬರೆದರೆಎ ಹಾಡಾಗಿ ಹೊರ ಹೋಯಿತು

ಆಕಾಶವು ಚಿತ್ರದ ಸಂತೆ
ಬೇಕೆಂದರು ಸಿಗದು ಮತ್ತೆ
ಅಲ್ಲೂ ನೀಲಿ ಇಲ್ಲೂ ನೀಲಿ
ಆದರೂ ಏನೋ
ಖಾಲಿ ಖಾಲಿ

ಮೊಗ್ಗಿನ ಎದೆಯ ಒಳಗೆ
ಜಾರಲು ಇಬ್ಬನಿ ತವಕ
ತೇವವು ಆರುವ ಮುನ್ನ
ಎಲೆಯಲಿ ಇರುವೆ ಜಳಕ

ರುತುಗಳು ಓಡುತ ಇರಲಿ
ಸ್ರಿಷ್ಟಿಯು ಎಂದಿಗೂ ತಾಜಾ
ಬದುಕಿನ ಓಟದೆ ಮಾತ್ರ
ಬದಲಾವಣೆಯು ಸಹಜ

ಪರಿಚಯವಾಗಿ ನನಗೆ ನಾನೆ
ಭಾವನೆ ಹಂಚಿಕೊಳ್ಳಬೇಕು
ಒಳಗಿನ ತಮವೆಲ್ಲ ಬೆಳಕಾಗಲಿ

ಆಕಾಶವು ಚಿತ್ರದ ಸಂತೆ
ಬೇಕೆಂದರು ಸಿಗದು ಮತ್ತೆ
ಅಲ್ಲೂ ನೀಲಿ ಇಲ್ಲೂ ನೀಲಿ
ಆದರೂ ಏನೋ
ಖಾಲಿ ಖಾಲಿ

Watch YouTube video


Post a Comment

0 Comments