Input license here

ಇತ್ತೀಚಿನ ಪೋಸ್ಟ್‌ಗಳು

ನೀನೆ ನೀನೆ ( ರಣವಿಕ್ರಮ ಚಲನಚಿತ್ರ )

 

ಗಂಡು : ನೀನೆ ನೀನೆ ನೀನೆ ನೀನೆ ಕಣ್ಣ ತುಂಬಾ ನೀನೆ ತಾನೇ
ನೀನೆ ನೀನೆ ನೀನೆ ನೀನೆ ಮನಸು ಮುಟ್ಟೋ ಚನ್ನೆ ನೀನೆ
ಕೋಟಿ ಕೋಟಿ ಹುಡುಗಿರಲ್ಲಿ ನಿನ್ನಂತೆ ಯಾರು ಇಲ್ಲ
ನನ್ನ ಕಣ್ಣು ನಿನ್ನ ಬಿಟ್ಟು ಯಾರನ್ನು ನೋಡೋದಿಲ್ಲ
ನೀನೆ ನೀನೆ ನೀನೆ ನೀನೆ ಮನಸು ಮುಟ್ಟೋ ಚನ್ನೆ ನೀನೆ

ಹೆಣ್ಣು : ಬೇರೆ ಹುಡುಗರಿಗಿಂತ ನೀ ತುಂಬಾ ಬೇರೆ ಹೇಗೆ
ನಿನ್ನ ಹಾಗೆ ಯಾರು ಕಾಡಿಲ್ಲ ನನ್ನ ಹೀಗೆ
ಮಾರಾಯ ನಿನ್ನನ್ನು ಹೆತ್ತೋರ ಯಾರು
ಒಮ್ಮೆ ಮುದ್ದು ಕಂದ ಇನ್ನೊಮ್ಮೆ ಚೂರು ಪೋಲಿ
ನೀನೆ ಹಚ್ಚೊದೆನು ಆಕಾಶಕ್ಕೆಲ್ಲ ನೀಲಿ
ನೀ ಹುಟ್ಟಿದ ದಿವಸ ಹುಣ್ಣಿಮೆನಾ
ನಿನ್ನಿಂದ ಹೇಗೆ ಇನ್ನು ಉಳಿಸಲಿ ನನ್ನ ನಾ
ನೀನೆ ಹೇಳಿ ಒಂದು ಚೂರು ಪುಣ್ಯ ಕಟ್ಟಿಕೋ
ನೀನೆ ನೀನೆ ನೀನೆ ನೀನೆ ಮನಸು ಮುಟ್ಟೋ ಚಲುವ ನೀನೆ

ಗಂಡು : ಹಚ್ಚಿ ಇಟ್ಟೋರು ಯಾರು ಕಣ್ಣಲ್ಲಿ ಸಾಲು ದೀಪ
ನಿನ್ನಿಂದನೆ ಹೀಗ ಹೆಚ್ಚಾಯ್ತು ಭೂಮಿ ತಾಪ
ಕಣ್ಣಲ್ಲೇನೆ ಕೊಲ್ಲುತ್ತಿರಲ್ಲೆ ಮತ್ತೆ ಮತ್ತೆ ನನ್ನ ಗೆಲ್ಲುವೆ
ಬೂತ ಕನ್ನಡಿಲೂ ಕಾಣಲ್ಲ ಒಂದು ಲೋಪ
ನೂರಕ್ಕ ನೂರು ಅಂಕ ನಿಡೋಕೆ ತಕ್ಕ ರೂಪ
ಅಷ್ಟು ಚಂದ ನನ್ನ ಚೆಲುವೆ
ನಂಗೆ ಹೀಗ ಚೆಂದ ಇದುವೇ
ನನ್ನಲ್ಲೇ ಬಚ್ಚಿಡುವೆ ಹೋದಲ್ಲೆಲ್ಲಾ ಕೊಂಡೊಯ್ಯುವೆ
ಇನ್ನು ಎಂದು ನಿನ್ನ ನನ್ನ ಜೊತೆ ಜೊತೆಗೆ
ನೀನೆ ನೀನೆ ನೀನೆ ನೀನೆ ಕಣ್ಣ ತುಂಬಾ ನೀನೆ ತಾನೇ
ನೀನೆ ನೀನೆ ನೀನೆ ನೀನೆ (ಹೆಣ್ಣು : ನೀನೆ ನೀನೆ ನೀನೆ ನೀನೆ) ಮನಸು ಮುಟ್ಟೋ ಚನ್ನೆ ನೀನೆ(ಹೆಣ್ಣು : ಮನಸು ಮುಟ್ಟೋ ಚಲುವ ನೀನೆ)

Watch YouTube video

Post a Comment

0 Comments