Input license here

ಇತ್ತೀಚಿನ ಪೋಸ್ಟ್‌ಗಳು

ಕಣ್ಣಿನ ನೋಟಗಳು ( ಅಮೃತವರ್ಷಿಣಿ ಚಲನಚಿತ್ರ )

 

ಕಣ್ಣಿನ ನೋಟಗಳು

ಕೋಲ್ಮಿಂಚಿನ ಬಾಣಗಳು...

ಕಣ್ಣಿನ ನೋಟಗಳು

ಕೋಲ್ಮಿಂಚಿನ ಬಾಣಗಳು...
ಕಣ್ಣಿನ ಮಾತುಗಳು
ಬಿಡಿಸ್‍ಹೇಳದ ಒಗಟುಗಳು
ಕಣ್ಣಿನ ಹಾಡುಗಳು
ತಿರು ಗಿರುಗಿಸೋ ರಾಟೆಗಳು
ಇಂತೋಳ ಕಣ್ಣಿನಲಿ ನಾನು
ಸೇರಿಕೊಳ್ಳಲೆ ಹಾಡಿಕೊಳ್ಳಲೆ
ಸ್ವರ್ಗ ಇಲ್ಲಿಯೆ ಕಂಡುಕೊಳ್ಳಲೆ..
ಕಣ್ಣಿನ ನೋಟಗಳು
ಕೋಲ್ಮಿಂಚಿನ ಬಾಣಗಳು...
ಕಣ್ಣಿನ ಮಾತುಗಳು
ಬಿಡಿಸ್‍ಹೇಳದ ಒಗಟುಗಳು

{{{ಮನಸು}}}
ಓಹ್ ಓಹ್ ಓಹ್ ಜಿಗಿ ಜಿಗಿ ಜಿಗಿಯುವ

ಹಾ ಹಾ ಹಾ ಮಿನು ಮಿನು ಮಿನುಗುವ
ಹೆ ಹೆ ಹೆ ಕಚಗುಳಿ ಕಲಿಸುವ
ಹೂ ಮನಸಿದೆ..
ಮೈಮೇಲೆ ಹೊಸತನ ತರಿಸುವ
ಉಯ್ಯಾಲೆ ತೂಗಲು ಕಲಿಸುವ
ಸುವ್ವಾಲೆ ಪದಗಳ ಬರೆಸುವ
ಹೊಮ್ಮನಸಿದೆ
ಬರಸೆಳೆಯೋ ಒಳಗಿಳಿಯೋ
ಚಿಲಿಪಿಲಿಯ ಆಸೆಯಲಿ
ಅರೆಘಳಿಗೆ ಕಾಯದಲೇ
ಚಡಪಡಿಸೋ ಪ್ರೀತಿ ಮನಸಿನಲಿ
ಸೇರಿಕೊಳ್ಳಲೆ ಹಾಡಿಕೊಳ್ಳಲೆ
ಸ್ವರ್ಗ ಇಲ್ಲಿಯೆ ಕಂಡುಕೊಳ್ಳಲೆ
ಕಣ್ಣಿನ ನೋಟಗಳು
ಕೋಲ್ಮಿಂಚಿನ ಬಾಣಗಳು
ಈ ಮನಸಿನ ಮಾತುಗಳು
ಕವಿ ಬರೆಯದ ಕವನಗಳು

{{{{ಕನಸು}}}}
ಹ ಹ ಹ ಅಹಹಹ ಅನಿಸುವ

ಆಕಾಶ ಅಂಗೈಲಿರಿಸುವ
ಹೂಗಾತಿ ಸನಿಹವ ಬಯಸುವ
ಹೊಂಗನಸಿದೆ
ಎಲ್ಲೆಲ್ಲು ಚಿಗುರನು ಹುಡುಕುವ
ಏನೆಲ್ಲ ಸೊಗಸನು ಚೆಲ್ಲುವ
ಸಂಗಾತಿ ಬಯಕೆಯ ಬೆಸೆಯುವ
ಹಾಲ್ಗನಸಿದೆ
ಕ್ಷಣದೊಳಗೆ ಸೆರೆಹಿಡಿಯೋ
ತೆರೆಮರೆಯ ಚೆಲುವಿನಲಿ
ಚೈತ್ರಗಳ ಸೋಲಿಸುವ
ಹಾಡುಗಳ ಪ್ರೀತಿ ಕನಸಿನಲಿ
ಸೇರಿಕೊಳ್ಳಲೆ ಹಾಡಿಕೊಳ್ಳಲೆ
ಸ್ವರ್ಗ ಇಲ್ಲಿಯೆ ಕಂಡುಕೊಳ್ಳಲೆ
ಕಣ್ಣಿನ ನೋಟಗಳು
ಕೋಲ್ಮಿಂಚಿನ ಬಾಣಗಳು
ಮನಸಿನ ಮಾತುಗಳು
ಕವಿ ಬರೆಯದ ಕವನಗಳು
ಕನಸಿನ ಹಾಡುಗಳು
ಎದೆ ತಣಿಸುವ ಸೂತ್ರಗಳು
ಇಂಥೋಳ ಸನಿಹದಲಿ ನಾನು
ಸೇರಿಕೊಳ್ಳಲೆ ಹಾಡಿಕೊಳ್ಳಲೆ
ಸ್ವರ್ಗ ಇಲ್ಲಿಯೇ ಕಂಡುಕೊಳ್ಳಲೆ
ಸೇರಿಕೊಳ್ಳಲೆ ಹಾಡಿಕೊಳ್ಳಲೆ

ಸ್ವರ್ಗ ಇಲ್ಲಿಯೇ ಕಂಡುಕೊಳ್ಳಲೆ


Watch YouTube video

Post a Comment

0 Comments