ಒಂದೇ ಸಲ ಕಣ್ಣ ಮುಂದೆ
ಯಾರೊ ತಂದು ಇಟ್ಟೋತಿದೆ
ಹೊಸ ಭೂಮಿ ಹೊಸ ಬಾನು
ಬೀಸೋ ಗಾಳಿಯಲ್ಲು ಮಂದಹಾಸವು
ನಾಳೆಯಲ್ಲ ಇಂದೆ ಅಂದವಾದವು
ಬದುಕಿಗೆ ಇಂದು ಧನ್ಯವಾದವು
ಲೈಫ್ ಜೊತೆ ಒಂದ್ ಸೆಲ್ಪೀ
ಲೈಫ್ ಜೊತೆ ಒಂದ್ ಸೆಲ್ಪೀ....
ಲೈಫ್ ಜೊತೆ ಒಂದ್ ಸೆಲ್ಪೀ
ತೆಗೆದುಕೊ ಬಿಗಿದಪ್ಪಿ
ಒಂದೆ ಸಲ ಕಣ್ಣ ಮುಂದೆ
ಯಾರೊ ತಂದು ಇಟ್ಟಂತಿದೆ
ಹೊಸ ಭೂಮಿ... ಹೊಸ ಬಾನು
ಎಲ್ಲೆಡೆ ಚಲ್ಲಿದೆ ಸೂರ್ಯನ ಬೆಳಕು
ನೀನಗೂ ಉಂಟು ಅದರ ಪಾಲು
ಕಡಲ ಜೋರು ಕಾಡಿನ ಮೌನ
ಹಕ್ಕಿಯ ಹಾಡು ಸಮ್ಮನೆ ಕೇಳು
ನಿನಗಿದೆ ಉಸಿರು
ನಿನಗಿದೆ ಹೆಸರು
ನೀನಲ್ಲ ಕಲ್ಲು
ಜಗಕೆಎ ಇಂದು ನೀನ್ಯಾರೆಂದು
ಬಾ ಕೂಗಿ ಹೇಳು
ನಿನ್ನ ಬೊಗೆಸೆಯಲಿ ಚಂದ್ರ ಬಿಂಬವು
ಸಾಗೋ ಹಾದಿ ತುಂಬ ಸಾಲು ದೀಪವು
ಬದುಕಿಗೆ ಇಂದು ಧನ್ಯವಾದವು
ಲೈಫ್ ಜೊತೆ ಒಂದ್ ಸೆಲ್ಪೀ
ಲೈಫ್ ಜೊತೆ ಒಂದ್ ಸೆಲ್ಪೀ...
ಲೈಫ್ ಜೊತೆ ಒಂದ್ ಸೆಲ್ಪೀ
ತೆಗೆದುಕೊ ಬಿಗಿದಪ್ಪಿ
ಎತ್ತರ ಎತ್ತರ ಪರ್ವತ ಕೂಡ
ಏರಿ ನಿಲ್ಲಲು ಪಾದ ಕೆಳೆಗೆ
ಸಾವಿರ ಮೈಲು ಪಯಣ ಕೂಡ
ಶುರುವು ಮೊದಲ ಹೆಜ್ಜೆಯೊಳಗೆ
ಇರುವೆಗೂ ಕೂಡ ಇರುವುದು ಇಲ್ಲಿ
ಬಾಳೋಕೆ ಹಕ್ಕು
ಬದುಕು ಎಂದು ಬಂಧನ ವಲ್ಲ
ಸ್ವಾತಂತ್ರ ಬೇಕು
ಚಿಟ್ಟೆ ಹಿಂಡು ಬಂದು ಮುತ್ತು ಕೊಟ್ಟವು
ಬೆಳ್ಳಿ ಮೋಡವೆಲ್ಲ ಅಪ್ಪಿಕೊಡವು
ಬದುಕಿಗೆ ಇಂದು ಧನ್ಯವಾದವು
ಲೈಫ್ ಜೊತೆ ಒಂದ್ ಸೆಲ್ಪೀ
ಲೈಫ್ ಜೊತೆ ಒಂದ್ ಸೆಲ್ಪೀ...
ಲೈಫ್ ಜೊತೆ ಒಂದ್ ಸೆಲ್ಪೀ
ತೆಗೆದುಕೊ ಬಿಗಿದಪ್ಪಿ
Watch YouTube video
0 Comments