Input license here

ಇತ್ತೀಚಿನ ಪೋಸ್ಟ್‌ಗಳು

ನಮ್ಮಮ್ಮ ನಮ್ಮಮ್ಮ ( ಪುಟ್ನಂಜ ಚಲನಚಿತ್ರ )

ಅಮ್ಮನ ನೋಡಿರಮ್ಮ
ಸನ್ಮಾನ ಮಾಡಿರಮ್ಮ
ಹೊಟ್ಟೆಯ ತುಂಬಾ ಅನ್ನದ
ಮಕ್ಕಳ ಹೆತ್ತವಳೆ

ಬಾಗಿನ ನೀಡಿರಮ್ಮ
ಭಾಗ್ಯನ ಬೇಡಿರಮ್ಮ
ಹೊಕ್ಕಳ ಬಳ್ಳಿಗೆ
ಕುಡುಗೋಳಿಟ್ಟರು ನಗುತಾಳೆ

ನಮ್ಮಮ್ಮ. ನಮ್ಮಮ್ಮ
(ನಮ್ಮಮ್ಮ. ನಮ್ಮಮ್ಮ)
ಭೂಮಿ ತಾಯಮ್ಮ
(ಭೂಮಿ ತಾಯಮ್ಮ)

ನಮ್ಮಮ್ಮ. ನಮ್ಮಮ್ಮ
(ನಮ್ಮಮ್ಮ. ನಮ್ಮಮ್ಮ)
ಭೂಮಿ ತಾಯಮ್ಮ
(ಭೂಮಿ ತಾಯಮ್ಮ)

ಈ ಸುಗ್ಗಿ ತಂದವಳಾರಮ್ಮ
ನಮ್ಮಮ್ಮ. ನಮ್ಮಮ್ಮ
ಈ ಹುಗ್ಗಿ ತಂದವಳಾರಮ್ಮ
ಭೂಮಿ ತಾಯಮ್ಮ

ಈ ಅಂಬಲಿ ತಂದವಳಾರಮ್ಮ
ನಮ್ಮಮ್ಮ. ನಮ್ಮಮ್ಮ
ಈ ಓಕುಳಿ ತಂದವಳಾರಮ್ಮ
ಭೂಮಿ ತಾಯಮ್ಮ

ಒಂದು ನೆಲ್ಲು ಚೆಲ್ಲಿದರೆ
ರಾಶಿ ಮಾಡುವ
ಇವಳೆದೇನು ಕರುಣೆ ಪ್ರೀತಿಯೋ.

ನಮ್ಮಮ್ಮ. ನಮ್ಮಮ್ಮ
(ನಮ್ಮಮ್ಮ. ನಮ್ಮಮ್ಮ)
ಭೂಮಿ ತಾಯಮ್ಮ
(ಭೂಮಿ ತಾಯಮ್ಮ)

ನಮ್ಮಮ್ಮ. ನಮ್ಮಮ್ಮ
(ನಮ್ಮಮ್ಮ. ನಮ್ಮಮ್ಮ)
ಭೂಮಿ ತಾಯಮ್ಮ
(ಭೂಮಿ ತಾಯಮ್ಮ)

ಈ ಚಿನ್ನಮ್ಮ ನಮ್ಮಮ್ಮನಿಗೆ
ಮಗಳಮ್ಮ ಮಗಳಮ್ಮ
ಈ ಗಂಗಮ್ಮ ನಮ್ಮಮ್ಮನಿಗೆ
ಚೊಚ್ಚಲ ಮಗಳಮ್ಮ ಹೋ..
ಕೆಚ್ಚಲ ಮಗಳಮ್ಮ

ಆ ಮಂಜಮ್ಮ ನಮ್ಮಮ್ಮನಿಗೆ
ತಂಗ್ಯಮ್ಮ ತಂಗ್ಯಮ್ಮ
ಈ ಗಾಯಮ್ಮ ನಮ್ಮಮ್ಮನಿಗೆ
ಹತ್ತಿರದವಳಮ್ಮ ಹೋ…
ಬಿಟ್ಟಿರದವಳಮ್ಮ

ನಮ್ಮ ಅಮ್ಮಾನೂರಿನ ಬಳಗ
ತುಂಬಾ ತುಂಬಾ ಕಿರಿದಮ್ಮ
ಇವಳಿಗೀಗ ಶರಣು
ಶರಣು ಶರಣು
ಕೋಟಿ ಶರಣಮ್ಮ

ಈ ಸುಗ್ಗಿ ತಂದವಳಾರಮ್ಮ
ನಮ್ಮಮ್ಮ. ನಮ್ಮಮ್ಮ
ಈ ಹುಗ್ಗಿ ತಂದವಳಾರಮ್ಮ
ಭೂಮಿ ತಾಯಮ್ಮ

ಈ ಅಂಬಲಿ ತಂದವಳಾರಮ್ಮ
ನಮ್ಮಮ್ಮ. ನಮ್ಮಮ್ಮ
ಈ ಓಕುಳಿ ತಂದವಳಾರಮ್ಮ
ಭೂಮಿ ತಾಯಮ್ಮ

ಒಂದು ನೆಲ್ಲು ಚೆಲ್ಲಿದರೆ
ರಾಶಿ ಮಾಡುವ
ಇವಳೆದೇನು ಕರುಣೆ ಪ್ರೀತಿಯೋ.

ನಮ್ಮಮ್ಮ. ನಮ್ಮಮ್ಮ
(ನಮ್ಮಮ್ಮ. ನಮ್ಮಮ್ಮ)
ಭೂಮಿ ತಾಯಮ್ಮ
(ಭೂಮಿ ತಾಯಮ್ಮ)

ಈ ಕರಿಯ ನೇಗಿಲು ಕಟ್ಟಿದರು
ಅಚ್ಚಮ್ಮ ಮೆಚ್ಚಮ್ಮ
ಈ ಬಿಳಿಯ ಕಾಲು ಬಿತ್ತಿದರು
ಬೇಡ ಅನಲಮ್ಮ ಹೋ..
ಬೇಧ ಇರದಮ್ಮ

ಈ ಕೊಂಚ ಗೊಬ್ಬರ ಹರವಿದರು
ಅಚ್ಚಮ್ಮ ಮೆಚ್ಚಮ್ಮ
ಈ ಎಡಚ ಕವಣೆ ಬೀರಿದರು
ಪಾಪ ಅನಲಮ್ಮ ಹೋ..
ಕೋಪ ಇರದಮ್ಮ

ನಮ್ಮ ಅಮ್ಮ ಎಂದು ಎಂದು
ಮೇಲು ಕೀಳು ಮಾಡಿಲ್ಲ
ಮಕ್ಕಳಾಗಿ ನಾವು
ಅವಳ ಲಾಲಿ ಹಾಡಬೇಕಮ್ಮ

ಈ ಸುಗ್ಗಿ ತಂದವಳಾರಮ್ಮ
ನಮ್ಮಮ್ಮ. ನಮ್ಮಮ್ಮ
ಈ ಹುಗ್ಗಿ ತಂದವಳಾರಮ್ಮ
ಭೂಮಿ ತಾಯಮ್ಮ

ಈ ಅಂಬಲಿ ತಂದವಳಾರಮ್ಮ
ನಮ್ಮಮ್ಮ. ನಮ್ಮಮ್ಮ
ಈ ಓಕುಳಿ ತಂದವಳಾರಮ್ಮ
ಭೂಮಿ ತಾಯಮ್ಮ

ಒಂದು ನೆಲ್ಲು ಚೆಲ್ಲಿದರೆ
ರಾಶಿ ಮಾಡುವ
ಇವಳೆದೇನು ಕರುಣೆ ಪ್ರೀತಿಯೋ.

ನಮ್ಮಮ್ಮ. ನಮ್ಮಮ್ಮ
(ನಮ್ಮಮ್ಮ. ನಮ್ಮಮ್ಮ)
ಭೂಮಿ ತಾಯಮ್ಮ
(ಭೂಮಿ ತಾಯಮ್ಮ)

Watch YouTube video

Post a Comment

0 Comments