ಏನೇ ಕನ್ನಡತಿ…
ನೀ ಯಾಕೆ ಹಿಂಗಾಡ್ತಿ..

ಏನೇ ಕನ್ನಡತಿ…
ನೀ ಯಾಕೆ ಹಿಂಗಾಡ್ತಿ..
ಇಂಗ್ಲಿಷು ಯಾಕಾಡ್ತಿ
ಎಂದು ಕನ್ನಡ ಮಾತಾಡ್ತಿ …

ಈ ಕನ್ನಡ ನೆಲ ಕನ್ನಡ ಜಲ
ಕನ್ನಡ ಗಾಳಿ ಕನ್ನಡ ಅನ್ನ …

ಎಂಥಾ ಚೆಂದಾನೋ
ಗೊತ್ತೇನೆ ಶ್ರೀಮತಿ …..
ಯಾಕೆ ಈ ಥರ
ಅನುಕರಣೆ ಮಾಡುತೀ …

ಕನ್ನಡ ಸೊಗಡಲಿ
ನೀ ಸುಖವ ಕಾಣುತೀ …..
ಕಲಿಸೋಕೆ ಬಂದೆ ನಾ
ಕನ್ನಡದ ಭೂಪತಿ…

ಏನೇ ಕನ್ನಡತಿ…
ನೀ ಯಾಕೆ ಹಿಂಗಾಡ್ತಿ..
ಇಂಗ್ಲಿಷು ಯಾಕಾಡ್ತಿ
ಎಂದು ಕನ್ನಡ ಮಾತಾಡ್ತಿ …

ಪೊಗರು ತುಂಬ ನಡೆ
ಕೊಬ್ಬು ಎಲ್ಲ ಕಡೆ ….
ಮೂಗು ತುದಿ ಕೋಪ
ಸಾಕು ಸಾಕು ಬಿಡೆ …

ಆನೆ ಕೂಡ ಪಳಗಿಸೋಕೆ
ಅಂಕುಶವು ಒಂದಿದೆ….
ಹೆಣ್ಣು ಹುಲಿ ಪಳಗಿಸೋಕೆ
ಕನ್ನಡದ ಗಂಡಿದೆ…
ಕನ್ನಡದ ಗಂಡಿದೆ….
ಕನ್ನಡದ ಗಂಡಿದೆ….

ಬಾರೆ ಕಣ್ಮಣಿ
ನನ್ ಮುದ್ದಿನ್ ಅರಗಿಣಿ
ನೀ ಕೇಳು ಕಣಿ ಕಣಿ…

ಲಜ್ಜೆ ಗಿಜ್ಜೆ ಕಲಿಸ್ತೀನಿ
ನಿನ್ನ ಸೊಕ್ಕು ಇಳಿಸ್ತೀನಿ…
ಹೋಯ್…..

ಯಾಕೆ ಈ ಥರ
ಅನುಕರಣೆ ಮಾಡುತಿ…
ಯಾಕೆ ಈ ಥರ
ಅನುಕರಣೆ ಮಾಡುತಿ…

ಕನ್ನಡ ಸೊಗಡಲಿ
ನೀ ಸುಖವ ಕಾಣುತಿ…
ಕಲಿಸೋಕೆ ಬಂದೆ ನಾ
ಕನ್ನಡದ ಭೂಪತಿ…

ಏನೇ ಕನ್ನಡತಿ…
ನೀ ಯಾಕೆ ಹಿಂಗಾಡ್ತಿ..
ಇಂಗ್ಲಿಷು ಯಾಕಾಡ್ತಿ
ಎಂದು ಕನ್ನಡ ಮಾತಾಡ್ತಿ …

ಕುಂಕುಮ ಬೊಟ್ಟು
ಹಣೆಯ ಮೇಲಿಟ್ಟು ….
ಚೆಂದದ ಸೀರೆವುಟ್ಟು
ಹೂವ ಮುಡಿಯಲಿಟ್ಟು ..

ಬಳುಕಿ ನಡೆದು ಬರುವಾಗ
ಕಣ್ಣೆರೆಡು ಸಾಲದು ..
ಈ ಜೀನ್ಸು ಜಾಕೆಟ್ಟು
ನಿನ್ನಂದಕೆ ಸಲ್ಲದು…
ನಿನ್ನಂದಕೆ ಸಲ್ಲದು….
ನಿನ್ನಂದಕೆ ಸಲ್ಲದು….

ಮುತ್ತಿನ ಮೂಗುತಿ
ಎಂಥ ಚೆಂದ ಅನ್ನುತಿ
ಅದೇ ನಾಡ ಸಂಸ್ಕೃತಿ…

ನಡೆ ನುಡಿ ಕಲಿಸ್ತೀನಿ..
ಕನ್ನಡತಿ ಮಾಡುತೀನಿ…
ಹೋಯ್…

ಯಾಕೆ ಈ ಥರ
ಅನುಕರಣೆ ಮಾಡುತೀ
ಯಾಕೆ ಈ ಥರ
ಅನುಕರಣೆ ಮಾಡುತೀ

ಕನ್ನಡ ಸೊಗಡಲಿ
ನೀ ಸುಖವ ಕಾಣುತಿ…
ಕಲಿಸೋಕೆ ಬಂದೆ ನಾ
ಕನ್ನಡದ ಭೂಪತಿ..

ಏನೇ ಕನ್ನಡತಿ…
ನೀ ಯಾಕೆ ಹಿಂಗಾಡ್ತಿ..
ಇಂಗ್ಲಿಷು ಯಾಕಾಡ್ತಿ
ಎಂದು ಕನ್ನಡ ಮಾತಾಡ್ತಿ …

ಈ ಕನ್ನಡ ನೆಲ ಕನ್ನಡ ಜಲ
ಕನ್ನಡ ಗಾಳಿ ಕನ್ನಡ ಅನ್ನ …

ಎಂಥಾ ಚೆಂದಾನೋ
ಗೊತ್ತೇನೆ ಶ್ರೀಮತಿ …..
ಯಾಕೆ ಈ ಥರ
ಅನುಕರಣೆ ಮಾಡುತೀ …

ಕನ್ನಡ ಸೊಗಡಲಿ
ನೀ ಸುಖವ ಕಾಣುತೀ …..
ಕಲಿಸೋಕೆ ಬಂದೆ ನಾ
ಕನ್ನಡದ ಭೂಪತಿ…

ಕನ್ನಡ ಸೊಗಡಲಿ
ನೀ ಸುಖವ ಕಾಣುತೀ …..
ಕಲಿಸೋಕೆ ಬಂದೆ ನಾ
ಕನ್ನಡದ ಭೂಪತಿ…


Watch YouTube video