Input license here

ಇತ್ತೀಚಿನ ಪೋಸ್ಟ್‌ಗಳು

ಕಾಡ ನೋಡ ಹೋದೆ ( ಸಿ. ಬಿ. ಐ. ಶಂಕರ್ ಚಲನಚಿತ್ರ )

 

ಕಾಡು ನೋಡ ಹೋದೆ
ಕವಿತೆಯೊಡನೆ ಬಂದೆ
ಕವಿತೆಯೊಳಗೆ ಹೋಗಿ
ರಾಗದೊಡನೆ ಬಂದೆ

ಕಡಲ ನೋಡ ಹೋದೆ
ಮಾಯದ ಕಲೆಗೆ ಬಲೆಯ ತಂದೆ
ಬಲೆಯ ಬೀಸಿ ಕಾದು
ಮೋಹದ ತರುಣಿಯೊಡನೆ ಬಂದೆ

ಮಾತನಾಡಲು ಅವಳು
ಮಾಯವಾದಳು
ಕಾಡು ನೋಡ ಹೋದೆ
ಕವಿತೆಯೊಡನೆ ಬಂದೆ

ಹೂವಿನಲಿ ಅವಿತೆ
ಬಿಡಲಿಲ್ಲ ನಿನ್ನ ಕವಿತೆ
ಸರಾಗವಾಗಿ ಕಾಡಿದೆ
ಪರಾಗವಾಗಿ ಹಾರಿದೆ

ಕಾವ್ಯವಾದೆ ನಾನು
ಬಿಡಲಿಲ್ಲ ನನ್ನ ನೀನು
ಸುನಾದವಾಗಿ ಕೂಗಿದೆ
ಪ್ರಯೋಗ ಮಾಡಿ ಹಾಡಿದೆ

ಕರೆದರೆ ಇಲ್ಲ ಎನ್ನದೆ ಬರುವ
ಬೆರತರೆ ಮಾತೆ ಆಡದೇ ಇರುವ
ಚೆಲುವ ಚಂದ್ರಿಕೆ ಕಾವ್ಯ ಕನ್ನಿಕೆ

ಮಾತನಾಡಲು ಅವಳು
ಮಾಯವಾದಳು
ಕಾಡು ನೋಡ ಹೋದೆ
ಕವಿತೆಯೊಡನೆ ಬಂದೆ

ಮೋಡವಾಗಿ ಹೋದೆ
ಬಿಸಿಲಾಗಿ ನೀನು ಬಂದೆ
ಅದೇಕೆ ನೀರು ಮಾಡಿದೆ
ನನ್ನೇಕೆ ಸ್ನಾನ ಮಾಡಿದೆ

ಅಲೆಗಳಾಗಿ ಹೋದೆ
ನೀ ಬೆಳದಿಂಗಳಾಗಿ ಬಂದೆ
ಅದೇನು ಮೋಡಿ ಮಾಡಿದೆ
ನಾನೇಕೆ ಮೇಲೆ ಹಾರಿದೆ

ಇಳಿದರೆ ಧಾರೆ ಆಗುವ ಹಿಮವೇ
ಸೆಳೆದರೆ ಪ್ರಣಯವಾಗುವ ಸುಮವೇ
ಚೆಲುವೆ ಬಾಲಿಕೆ ಕವಿಯ ಕಾಣಿಕೆ
ಮಾತನಾಡಲು ಅವಳು
ಮಾಯವಾದಳು

ಕಾಡು ನೋಡ ಹೋದೆ
ಕವಿತೆಯೊಡನೆ ಬಂದೆ
ಬಲೆಯ ಬೀಸಿ ಕಾದು
ಮೋಹದ ತರುಣಿಯೊಡನೆ ಬಂದೆ

ಮಾತನಾಡಲು ಅವಳು


Watch YouTube video

Post a Comment

0 Comments