Input license here

ಇತ್ತೀಚಿನ ಪೋಸ್ಟ್‌ಗಳು

ಎಲ್ಲ ಅಳುತಿರುವಾಗ ನಾನು ನುಗುವುದು ಹೇಗೆ

 ಎಲ್ಲ ಅಳುತಿರುವಾಗ ನಾನು ನುಗುವುದು ಹೇಗೆ,
ಎದ್ದು ಹೋದೆನು ಮತ್ತುಸಂಜೆಯೊಳಗೆ...
ಜ್ವರ ಬಂದ ಮಗು ತೊಟ್ಟಿಲಲ್ಲಿ ಮಲಗಿರುವುದನು
ನಾ ಕಂಡೆ, ಅದರ ತುಟಿ ಅದುರುತ್ತಿತ್ತು.

ಹೊರಗೆ ನಡೆಯುತ್ತಿತ್ತು ಲೋಕಾಂತದ ಚರ್ಚೆ,
ಭಾಗಿಯಾಗದೆ ದೂರ ಕುಳಿತೆ ನಾನು;
ಸಮಸ್ಯೆಯೇ ಬೇರೆ,ಪರಿಹಾರ ಅಲ್ಲಿಗೆ ದೂರ
ಹಣೆಯಲ್ಲಿ ಬೆವರ ಹನಿ ಕಂಡು ಬಂತು.

ಸಂತಸದ ಹಾಡು ಇಲ್ಲಿಗೆ ದೂರ ಎನಿಸಿತ್ತು,
ಬೆಳಕು ಅರಿತು ಇರುಳು ತುಂಬಿಕೊಂಡು;
ನಕ್ಷತ್ರಗಳ ಚೆಲ್ಲಿ ಆಕಾಶ ಹೊಳೆದಿತ್ತು,
ತೇಲಿ ಬಂದಿತು ಯಾರ ಹಾಡೊ ಕಿವಿಗೆ.

ತಾಯಿ ಬಂದಳು ಬಳೀಗೆ, ಎತ್ತಿಕೊಂಡಳು ಮಗುವ
ಅದರ ತುಟಿಯನ್ನಿಟ್ಟು ತನ್ನ ಮೊಲೆಗೆ;
ಇರುಳು ಬೆಳೆಯಿತು, ನನಗೆ ನಿದ್ದೆಯೇ ಬರಲಿಲ್ಲ
ಅನುಭವವೊ ಕನಸೊ ಇದು ತಿಲೀಯಲಿಲ್ಲ .

-ಕೆ ಎಸ್ ನರಸಿಂಹಸ್ವಾಮಿಯವರು.

Post a Comment

0 Comments