Input license here

ಇತ್ತೀಚಿನ ಪೋಸ್ಟ್‌ಗಳು

ಹೊಸಿಲ ಬಳಿ ಬಂದೊಡನೆ ಬಾಗಿಲನು ತೆರೆವಾಕೆ,

ಹೊಸಿಲ ಬಳಿ ಬಂದೊಡನೆ ಬಾಗಿಲನು ತೆರೆವಾಕೆ,
'ಹೆಸರೇನು?' ಎನುವಾಕೆ ಮನೆಯೊಳಿಲ್ಲ.
ಬಿಸಿಲೊಳಗೆ, ನೆಳಲೊಳಗೆ ಪಕ್ಕದಲಿ ನಗುವಾಕೆ,
ಹಸುರು ಕುಪ್ಪಸದಾಕೆ ಮನೆಯೊಳಿಲ್ಲ.

ಅಕ್ಕರೆಯ ದನಿಯಾಕೆ ಸಕ್ಕರೆಯ ನುಡಿಯಾಕೆ
ಸಿಕ್ಕಿದರೆ ಬಿಡದಾಕೆ ಮನೆಯೊಳಿಲ್ಲ.
ಚಿಕ್ಕಮನೆಯೊಳಗೆನ್ನ ಪಕ್ಕದಲಿ ನಗುವಾಕೆ,
ಉಕ್ಕುವೊಲ್ಮೆಯ ಮಡದಿ ಮನೆಯೊಳಿಲ್ಲ.

'ರಾಯರೇ' ಎಂದೆನ್ನ ಪ್ರೀತಿಯಲಿ ಕರೆವಾಕೆ
ರಾತ್ರಿಯಲಿ ವೀಣೆಯನು ನುಡಿಸುವಾಕೆ.
ರಾಗದಲ್ ಚಂದಿರನ ತಾರೆಗಳ ತರುವಾಕೆ,
ರಾಶಿಹೊಗಳ ಹೆಣೆದು ಮುಡಿಸುವಾಕೆ.

ಎಂದು ಬರುವಳೊ, ಕಾಣೆ, ನನ್ನೆದೆಯನಾಳುವಾಕೆ,
ಅಂದು ಹಸೆಮಣೆಯ ಮೇಲೆನ್ನೊಡನೆ ಬೆಳಗದಾಕೆ,
ಸಡಗರದಿ ನನ್ನೊಡನೆ ಒಂದಾಗಿ ಸಾಗುವಾಕೆ,
ನಡುಗಡಲ ತೆರೆಗಳಲಿ ನರ್ತಿಸುವ ರತ್ನನೌಕೆ!

- ಕೆ. ಎಸ್. ನರಸಿಂಹಸ್ವಾಮಿಯವರು.

Post a Comment

0 Comments