Input license here

ಇತ್ತೀಚಿನ ಪೋಸ್ಟ್‌ಗಳು

ಹೂವು ಅರಳುವ ಮುನ್ನ

ಹೂವು ಅರಳುವ ಮುನ್ನ
ಹಕ್ಕಿ ಹಾಡುವ ಮುನ್ನ
ಮೀನು ತುಳುಕುವ ಮುನ್ನ...ತೊರೆಗಳಲ್ಲಿ

ನಲ್ಲನೊಂದಿಗೆ ನಲ್ಲೆ ನಗುನಗುತ ಬರುವಗ
ನಲ್ಲನೊಂದಿಗೆ ನಲ್ಲೆ ನಗುನಗುತ ಬರುವಗ

ಚೆಲುವ ಕಂಡೆನು ನಾನು ಬದುಕಿನಲ್ಲಿ

ಹೂವು ಅರಳುವ ಮುನ್ನ
ಹಕ್ಕಿ ಹಾಡುವ ಮುನ್ನ
ಮೀನು ತುಳುಕುವ ಮುನ್ನ...ತೊರೆಗಳಲ್ಲಿ

----------------೧----------------------

ಹಸಿರು ಹುಲ್ಲಿನಮೆಲೆ...ಹೂವ ಚೆಲ್ಲುವ ಬಾಲೆ
ಯಾರೆಂದು ತಿಳಿಯದೆ ನಾನು ನಕ್ಕೆ

ಹಸಿರು ಹುಲ್ಲಿನಮೆಲೆ...ಹೂವ ಚೆಲ್ಲುವ ಬಾಲೆ
ಯಾರೆಂದು ತಿಳಿಯದೆ ನಾನು ನಕ್ಕೆ

ಚಳಿಗಾಲದಿರುಳಿನಲಿ ಬಿತ್ತ ಕನಸುಗಳಲ್ಲಿ..
ಚಳಿಗಾಲದಿರುಳಿನಲಿ ಬಿತ್ತ ಕನಸುಗಳಲ್ಲಿ..
ನಾನು ನೋವನು ಕಂಡೆ ಹಾದಿಯಲ್ಲಿ
ನಾನು ನೋವನು ಕಂಡೆ ಹಾದಿಯಲ್ಲಿ

ಹೂವು ಅರಳುವ ಮುನ್ನ
ಹಕ್ಕಿ ಹಾಡುವ ಮುನ್ನ
ಮೀನು ತುಳುಕುವ ಮುನ್ನ...ತೊರೆಗಳಲ್ಲಿ

----------------೨--------------------

ಶಿಖರಗಳ ಬಿಸಿಲಲ್ಲಿ..
ಬಿದಿರ ಕಣ್ಣೆಳಲಲ್ಲಿ
ನಾನು ಕಂಡೆನು ಗೆಳತಿ ನಿನ್ನೊಲವನು

ಹೊಂದಳೆ ಹೂವಿನಲ್ಲಿ...ಮುಳ್ಳ ದಾಟಿದ ನಲಿವ
ಹೊಂದಳೆ ಹೂವಿನಲ್ಲಿ...ಮುಳ್ಳ ದಾಟಿದ ನಲಿವ

ನಾನು ಕಂಡೆನು ನಿನ್ನ ಪರಿಮಳವನ್ನು
ನಾನು ಕಂಡೆನು ನಿನ್ನ ಪರಿಮಳವನ್ನು

ಹೂವು ಅರಳು ಮುನ್ನ
ಹಕ್ಕಿ ಹಾಡುವ ಮುನ್ನ
ಮೀನು ತುಳುಕುವ ಮುನ್ನ...ತೊರೆಗಳಲ್ಲಿ

ನಲ್ಲನೊಂದಿಗೆ ನಲ್ಲೆ ನಗುನಗುತ ಬರುವಗ
ನಲ್ಲನೊಂದಿಗೆ ನಲ್ಲೆ ನಗುನಗುತ ಬರುವಗ

ಚೆಲುವ ಕಣ್ದೆನು ನಾನು ಬದುಕಿನಲ್ಲಿ

- ಕೆ. ಎಸ್. ನರಸಿಂಹಸ್ವಾಮಿಯವರು.

Post a Comment

0 Comments