Input license here

ಇತ್ತೀಚಿನ ಪೋಸ್ಟ್‌ಗಳು

ಗಿರಿಯ ಶಿರದ ಮೇಲೆ ಸರಿವ

ಗಿರಿಯ ಶಿರದ ಮೇಲೆ ಸರಿವ
ಬಿಳಿಯ ಮುಗಿಲ ಸೆರಗಿನಿಂದ
ಮಿನುಗು ತಾರೆ ನಲಿವಿನಿಂದ
ನನ್ನ ಕರೆಯಿತು ||ಪ||

ಬನದ ಎಲರ ಉಸಿರಿನಿಂದ
ತಳವ ತೆರೆದ ಹೂವಿನಿಂದ
ಮೊರೆವ ದುಂಬಿ ಒಲವಿನಿಂದ
ನನ್ನ ಕರೆಯಿತು ||ಗಿರಿಯ||

ಬಿದಿರ ಮೆಳೆಯ ನೆಳಲಿನಿಂದ
ಕೇಳಿ ಬಂದ ಕೊಳಲಿನಿಂದ
ಚೆಲುವು ತುಂಬು ಗೆಲುವಿನಿಂದ
ನನ್ನ ಕರೆಯಿತು ||ಗಿರಿಯ||

- ಕೆ. ಎಸ್. ನರಸಿಂಹಸ್ವಾಮಿಯವರು.

Post a Comment

0 Comments