ಅತ್ತು ಸತ್ತು ಹೋಗುವ ಬದುಕನೆತ್ತಿ ತುಂಬಿ ಜೀವಕಳೆಯ ಮುತ್ತನಿಟ್ಟು ರೆಪ್ಪೆ ಎತ್ತಿ ಕಣ್ಣಿನೊಳಗೆ ದೀಪ ಹಚ್ಚಿ ಎದೆಯ ಹೊರೆಯನಿಳಿಸಿ ಮೇಲೆ ಬರುವ ನಗುವೆ ಬದುಕ ಬೆಲೆ, ನಕ್ಕರೆ ನಗು ಬಲುದಿಳೆ
ಕೆನ್ನೆ ಕೆನ್ನೆ ಒಂದು ಮಾಡಿ ನಗುವ ನನ್ನ ನಿನ್ನ ನೋಡಿ ಕನ್ನಡಿಯಲಿ ಒಂದು ಜೋಡಿ ನಕ್ಕು ಬಿಡಲಿ ಒಮ್ಮೆ ನಗು ನಕ್ಕು ಬಿಡು ಚಿಕ್ಕ ಮುತ್ತು ಸುರಿದು ಹೋಗಲಿ ಪಕ್ಕನೊಮ್ಮೆ ನಕ್ಕು ಬಿಡು ಚಿಂತೆ ತೊಲಗಲಿ ||ಒಮ್ಮೆ||
0 Comments