ಬೀದಿಯಲಿ ಬಂದ ಮಗುವನು ನಾನು ಕೇಳಿದೆ
'ನಿಮ್ಮಪ್ಪನೆಲ್ಲೆ'ಂದು. ತಲೆಯಾಡಿಸಿತು, ತನಗೆ
ತಿಳಿಯದೆಂದು. ಮತ್ತೆ ಕೇಳಿದೆನು 'ತಾಯಾರು?'
ಎಂದು. 'ಗೊತ್ತಿಲ್ಲ' ಎಂದಿತು, ಕಣ್ಣಲ್ಲಿ ನೀರು.
ತಾನು ಹುಟ್ಟಿದ ಮನೆಯೆ ಮರೆತು ಹೋಗಿದೆ ಅದಕೆ,
ಅಣ್ಣ ತಮ್ಮಂದಿರಾರೊ ಅಕ್ಕ ತಂಗಿಯರಾರೊ
ತಿಳಿಯದದಕೆ. ತೊಟ್ಟಂಗಿ ಹರಿದಿತ್ತು, ಬಂತು
ಅದು ನನ್ನೆಡೆಗೆ, ಗಾಯವಗಿತ್ತದರ ಗಲ್ಲದ ಬಳಿ.
ನನ್ನ ಬದುಕಿನ ಅರಿವು ನನಗೆ ತಿಳಿಯದು ನೋಡಿ,
ಆದರೂ ಪ್ರಶ್ನೆ ಏಳುತ್ತಲಿದೆ ತಲೆಬಾಗಿ.
ಬಂದ ಮಗುವಿನ ವಿವರ ತಿಳಿದಿಲ್ಲ; ಆ ಮಗು
ಬೀದಿಯುದ್ದಕು ಅಳುತ ಬಂತು ಬಳಿಗೆ.
ಆಮಗುವಿನಂತೆಯೆ ನಾನೂ ತಬ್ಬಲಿಯಹುದು;
ಅದರ ಬೆನ್ನ ತಟ್ಟಿದೆ ನಾನು ದಾರಿಯೊಳಗೆ...
-ಕೆ ಎಸ್ ನರಸಿಂಹಸ್ವಾಮಿಯವರು
0 Comments