Input license here

ಇತ್ತೀಚಿನ ಪೋಸ್ಟ್‌ಗಳು

ಸಂಗಮ

 ಸಂಗಮ

ಭಾವ ಬರುವನು ದೂರದೂರಿಂದ;
ಎಳೆಯಿತು ಪ್ರೇಮ.

ಅಕ್ಕ ಕಾದಿಹಳು ಒಳಬಾಗಿಲನ್ನೊರಗಿ;
ಅರಳಿತು ಕಣ್ಣು

ಸಂತಸದ ರಾತ್ರಿಯಲಿ
ಅಕ್ಕರೆಯ ಸೆರೆಯೊಳಗೆ

'ಭಾವ -ಅಕ್ಕ ' ಎಂದು ಬಿಡಿಸಿ ಕರೆದರೆ,ತಂಗಿ,
ಪ್ರೇಮಪುರಿಯಲಿ ಮಹಾಪಾಪಕರವದುವೆ

ಮಾತು ಹೂವಿನ ಮೇಲುಬಣ್ಣ;
ಭಾವ ಒಳಗಿನ ಮಧುರ ಮಕರಂದ

ಕವಿತೆಯ ಬಿಡಿಸಿ 'ಭಾವ ಇದು, ಭಾಷೆಯಿದು'
ಎನ್ನುವುದು ಕಟುಕತನ.

ಇದು ಕವಿತೆ.ಇವನು ಕವಿ ಎನ್ನುವವ ತಿಳಿಗೇಡಿ
ಕೊಡುವ ಕೈ ಕಾಣಿಸದೆ ಕೊಟ್ಟೊಡವೆಯಲಿ
ನನ್ನ ಹಾಡಿನ ಓದಲು ಸೇರಗೆಲ್ಲ ನಾನೆ!

- ಕೆ. ಎಸ್. ನರಸಿಂಹಸ್ವಾಮಿಯವರು.

Post a Comment

0 Comments