Input license here

ಇತ್ತೀಚಿನ ಪೋಸ್ಟ್‌ಗಳು

ಹನ್ನೆರಡು ದುಃಖಗಳು ನನ್ನಾಹುತಿಗೊಂಡಿವೆ

 ಹನ್ನೆರಡು ದುಃಖಗಳು ನನ್ನಾಹುತಿಗೊಂಡಿವೆ;
ಮಲಗಿ ಮರೆಯುವೆನೆಲ್ಲ ಎಂಬಾಸೆ ಒಂದು ಗಳಿಗೆ.
ಹಾಸಿ ಹೊದ್ದಿಸಿದಳಲು ನಿದ್ದೆಯನು ಕಣ್ಗೆ ಬಿಡದೆ,
ನಾನಿಲ್ಲಿ ಕೊರಗುವೆನು ಮೆತ್ತೆಯಲಿ ಮೆತ್ತಗಾಗಿ.
ನನ್ನ ಗುಡಿಸಿಲ ಮೇಲೆ ಮಲಗಿಹುದು ಬೆಳ್ಳಿಬೆಳಕು.
ಅರೆಬೆಳೆದ ಚಂದಿರನ ತಂಪಾದ ಎಳೆಯ ಬೆಳಕು.
ನನ್ನಿಯ, ನಿನ್ನನೇ ಬಯಸುವೆನು; ಅಗಲಿ, ಕೊರಗಿ
ನಾನಿಲ್ಲಿ ಕರಗುವೆನು ದುಃಖದಲಿ ತೇಲಿ ಮುಳುಗಿ.

- ಕೆ ಎಸ್ ನರಸಿಂಹಸ್ವಾಮಿಯವರು

Post a Comment

0 Comments