ಶಕ್ತಿಯೇ ಜೀವನದ ಶ್ರೇಷ್ಠ ಮಾರ್ಗದರ್ಶಕ ಧರ್ಮದಲ್ಲಿ, ಉಳಿದ ವಿಷಯಗಳಲ್ಲಿ ಹೇಗೋ ಹಾಗೆ, ನಿಮ್ಮನ್ನು ದುರ್ಬಲಗೊಳಿಸುವ ಪ್ರತಿಯೊಂದನ್ನೂ ತ್ಯಜಿಸಿ ಬಿಡಿ. ಅದಕ್ಕೂ ನಿಮಗೂ ಏನೇನು ಸಂಬಂಧ ಇರುವುದು ಬೇಡ.
ಶಕ್ತಿಯೇ ಬದುಕು, ದುರ್ಬಲತೆಯೇ ಸಾವು. ಶಕ್ತಿ ಆನಂದದಾಯಕ; ಬದುಕು ಅನಂತ ಹಾಗೂ ಅಮರ.
ನಂಬಿಕೆ; ತನ್ನ ಶಕ್ತಿಯಲ್ಲಿ ನಂಬಿಕೆ, ದೇವರಲ್ಲಿ ನಂಬಿಕೆ, ಇದೇ ಮಹಿಮೆ ರಹಸ್ಯ.
ನಿಮ್ಮ ನರಗಳನ್ನು ಬಲಿಷ್ಠವನ್ನಾಗಿ ಮಾಡಿಕೊಳ್ಳಿ. ನಿಮಗೆ ಬೇಕಾಗಿರುವುದು ಕಬ್ಬಿಣದಂತಹ ಮಾಂಸಖಂಡಗಳು; ಮತ್ತು ಉಕ್ಕಿನಂತಹ ನರಗಳು.
ಮೊದಲು ಅನ್ನ; ಅನಂತರ ಧರ್ಮ.
ಪ್ರಿತಿ ಎಂದಿಗೂ ಸೋಲುವುದಿಲ್ಲ; ಇಂದು ಅಥವಾ ನಾಳೆ ವರ್ಷಗಳೇ ಉರುಳಲಿ, ಸತ್ಯಕ್ಕೆ ಜಯ ಖಂಡಿತ,
ಸುಖ ಹಂಚಿದಷ್ಷು, ಹೆಚ್ಷುತ್ತದೆ, ದುಃಖ ಹಂಚಿದಷ್ಟೂ ಕಡಿಮೆಯಾಗುತ್ತದೆ.
ಸತತ ಪ್ರಯತ್ನ ಮತ್ತು ದೃಡ ಸಂಕಲ್ಪವಿದ್ದರೆ ಮಾತ್ರ ಜಯಗಳಿಸಬಹುದು.
ಪವಿತ್ರವಾದ ಮತ್ತು ಬಲಯುತವಾದ ಸಂಕಲ್ಪ ಸರ್ವ ಶಕ್ತವಾದುದು.
ಯಾವುದು ಸ್ವಾರ್ಥದಿಂದ ಕೂಡಿದೆಯೋ ಅದು ಅನೀತಿಯುತವಾದುದು, ಯಾವುದು ನಿಸ್ವಾರ್ಥತೆಯಿಂದ ಕೂಡಿದೆಯೋ ಅದು ನೀತಿಯುತವಾದುದು.
ಎಲ್ಲ ಪೂಜೆ ನಮ್ಮ ಎಲ್ಲ ಸುಖ ಸಂತೋಷಕ್ಕೆ ಮೂಲ.
ನಾವು ಮಾವುದಕ್ಕೆ ಯೋಗ್ಯರೋ, ಅದು ನಮಗೆ ಲಭ್ಯವಾಗುತ್ತದೆ.
ನಮ್ಮ ಬಾಳು ಚೆನ್ನಾಗಿದ್ದರೆ, ಹಸನಾಗಿದ್ದರೆ ಮಾತ್ರ, ಜಗತ್ತೂ ಚೆನ್ನಾಗಿರುತ್ತದೆ. ಹಸನಾಗಿರಿತ್ತದೆ.
ಒಡೆಯನಂತೆ ಕೆಲಸಮಾಡಬೇಕು, ಆಳಿನಂತಲ್ಲ.
ವಿಕಾಸವೇ ಬದುಕು, ಸಂಕೋಚವೇ ಮರಣ, ಪ್ರೇಮವೆಲ್ಲಾ ವಿಕಾಸ. ಸ್ವಾರ್ಥವೆಲ್ಲಾ ಸಂಕೋಚ. ಆದ್ದರಿಂದ ಪ್ರೇಮವೇ ಬದುಕಿನ ಧರ್ಮ.
ಜೀವನ ಎಂದರೆ ತನ್ನನ್ನು ನಾಶಗೊಳಿಸಲು ಪ್ರಯತ್ನಿಸುತ್ತಿರಿವ ಶಕ್ತಿಗಳ ಮಧ್ಯಜೀವಿ ವೃದ್ದಿ ಹೊಂದುವುದೇ ಆಗಿದೆ.
ಹಣ, ಹೆಸರು, ಪಾಂಡಿತ್ಯ, ಯಾವುದರಿಂದಲೂ ಲಾಭವಿಲ್ಲ, ಕಷ್ಟಗಳ ಆಭೇದ್ಯ ಕೋಟೆಗಳನಗನು ಸೀಳಿಕೊಂಡು ನುಗ್ಗಬಲ್ಲದ್ದು ಚಾರಿತ್ರ್ಯವೊಂದೇ ಎಂಬುದು ಜ್ಞಾಪಕದಲ್ಲಿರಲಿ.
ಇಡೀ ಮಾನವಕೋಟಿಗೆ ಅನುಕಂಪ ಹಾಗೂ ಪ್ರೀತಿ ತೋರುವುದೇ ನಿಜವಾದ ಧರ್ಮ.
ಪ್ರತಿಯೊಂದು ಸುಖದ ಅನಂತರ ದುಃಖ ಬಂದೇ ಬರುತ್ತದೆ. ಅವು ದೂರದಲ್ಲಿರಬಹುದು ಅಥವಾ ಹತ್ತಿರದಲ್ಲಿರಬಹುದು.
ಮೊದಲು ನಾವು ದೇವರಾಗೋಣ. ಅನಂತರ ಇತರರು ದೇವರಾಗಲು ಸಹಾಯ ಮಾಡೋಣ.
ಯಾವುದಾದರೂ ಕೆಲಸ ಮಾಡುತ್ತಿರುವಾಗ, ಆ ಕೆಲಸದಲ್ಲಿಯೇ ಮಗ್ನರಾಗಿರಬೇಕು ಅದೇ ಪೂಜೆ ಎಂದು ಭಾವಿಸಬೇಕು.
ಯಾವುದಕ್ಕೂ ಅಂಜಬೇಡಿ, ಅದ್ಭುತ ಕೆಲಸಗಳನ್ನು ನೀವು ಮಾಡಬಲ್ಲಿರಿ. ಭಯಪಟ್ಟರೆ ನಿಮ್ಮಿಂದ ಯಾವ ಕೆಲಸವೂ ಆಗುವುದಿಲ್ಲ.
ಈ ಪ್ರಪಂಚದಲ್ಲಿ ಮನುಷ್ಯನಾಗಿ ಹುಟ್ಟುದ ಮೇಲೆ ಏನಾದರೂ ಸ್ವಲ್ಪ ಒಳ್ಳೆಯ ಕೆಲಸವನ್ನು ಮಾಡಬೇಕು, ಕೇವಲ ಹುಳುವಂತೆ ಹುಟ್ಟಿ ಸತ್ತರೆ ಏನು ಪ್ರಯೋಜನ.
ಕಾರ್ಯಸಾಧನೆ ಬಹು ಒಳ್ಳೆಯದು. ಆದರೆ ಅದು ದೀರ್ಘ ಚಿಂತನೆಯ ಫಲ. ಆದ್ದರಿಂದ ಉನ್ನತ ಚಿಂತನೆ, ಉದಾತ್ತ ಭಾವನೆ ನಿಮ್ಮ ಮೆದುಳನ್ನು ತುಂಬಲಿ. ಇದನ್ನು ದೈನಂದಿನ ಜೀವನದಲ್ಲಿ ಹಗಲಿರುಳೂ ನಿಮ್ಮ ಮುಂದಿಟ್ಟುಕೊಳ್ಳಿ. ಇದರಿಂದ ಮಹತ್ತರ ಕಾರ್ಯ ನೆರವೇರುತ್ತದೆ.
ಭಕ್ತರಾಗುವರು ಒಂದು ಮಾತನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಢಾಂಬಿಕ ಭಕ್ತರಾಗುವುದಕ್ಕಿಂತ ನಾಸ್ತಿಕರಾಗಿರುವುದೇ ಉತ್ತಮ.
ಪ್ರತಿಯೊಂದು ಸಲ ನೀವು ದುರ್ಬಲತೆಯ ಅನುಭವ ಪಡೆದಾಗಲೂ ತಿಳಿಯಿರಿ, ನಿಮಗೆ ಮಾತ್ರವಲ್ಲದೆ, ನೀವು ಕೈಗೊಂಡ ಕಾರ್ಯಕ್ಕೂ ಪೆಟ್ಟನ್ನು ಕೊಡುತ್ತಿದ್ದೀರಿ ಎಂದು.
ನಾವು ಒಳ್ಳೆಯದನ್ನು ಪ್ರೀತಿಸಲು ಆರಂಭಿಸಿದರೆ, ನಮ್ಮಲ್ಲಿರವ ಕೆಟ್ಟದೆಲ್ಲಾ ಮಾಯಾವಾಗುತ್ತದೆ.
ಸೂರ್ಯ ಚಂದ್ರರನ್ನು, ನಾವು ಹುಟ್ಟಿದ ದಿನದಿಂದಲೂ ನೋಡುತ್ತಿದ್ದೇವೆ. ಆದರೆ ಅವರಂತೆ ಕೆಲಸ ಮಾಡುವುದನ್ನು ಮಾತ್ರ ಕಲಿಯಲಿಲ್ಲ.
ವಿಧವೆಯ ಕಣ್ಣೀರನ್ನೂ ಒರಸದ, ಬಡವರ ಬಾಯಿಗೆ ರೊಟ್ಟಿಯ ಚೂರೊಂದನ್ನು ಕೊಡದ ದೇವರ ಅಥವಾ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ.
ಯಾವ ಮಾನವನೂ ಒಂದು ಧರ್ಮಕ್ಕಾಗಿ ಜನ್ನವೆತ್ತಿಲ್ಲ. ಅವನದೇ ಅಂತರಂಗದಲ್ಲಿ ಧರ್ಮ ಇದೆ.
ಕಾಲ ಕೆಟ್ಟು ಹೊಯಿತು ಎಂದು ಹೇಳುತ್ತಾರೆ, ಆದರೆ ಕಾಲ ಕೆಟ್ಟಿಲ್ಲ, ಕೆಡುವುದೂ ಇಲ್ಲ. ಅದೇ ಸೂರ್ಯ, ಅದೇ ಚಂದ್ರ, ಅದೇ ಭೂಮಿ, ಅದೇ ಲೋಕ, ಆದರೆ ಕೆಟ್ಟಿರುವುದು ಮಾತ್ರ ಜನರ ನಡೆನುಡಿ, ಆಚಾರ ವಿಚಾರಗಳು ಮಾತ್ರ.
ಸ್ವಾತಂತ್ರ್ಯವಿಲ್ಲದೆ ಪ್ರೀತಿ ಉದಯಿಸುವುದಿಲ್ಲ.
ಹನುಮಂತನ ಶೀಲ ಯಾವಾಗಲೂ ಆದರ್ಶವಾಗಿರಲಿ.
ಮನುಷ್ಯನಲ್ಲಿ ಆಗಲೇ ಅಂತರ್ಗತವಾಗಿರುವ ಪರಿಪೂರ್ಣತೆಯನ್ನು ಪ್ರಕಟಿಸುವುದೇ ಶಿಕ್ಷಣ.
ಯಾರನ್ನೂ ದ್ವೇಷಿಸದವರು ಭಗವಂತನನ್ನು ಸೇರುತ್ತಾರೆ.
ಆಯಸ್ಸು ಅಲ್ಪ. ಪ್ರಪಂಚದ ತೋರಿಕೆಗಳು ಅನಿತ್ಯ, ಆದರೆ ಪರರಹಿತಕ್ಕಾಗಿ ಜೀವಿಸುವವರದೇ ಜೀವನ, ಮಿಕ್ಕವರು ಜೀವ ಶವಗಳು ಮಾತ್ರ.
ನೀವೂ ಬದುಕಿ, ಇತರರೂ ಬದುಕಲು ಬಿಡಿ.
ಏಳಿ! ಎದ್ದೇಳಿ! ಮಹಾತ್ಮರೆ! ಜಗತ್ತು ದುಃಖದಲ್ಲಿ ಬೇಯುತ್ತಿದೆ ನೀವು ನಿದ್ರಿಸಬಲ್ಲಿರೇನು? ಪವಡಿಸಿರಿವ ಪರಮತ್ಮರು ಎದ್ದೇಳುವವರಿಗೆ ನಮ್ಮ ಅಂತರಾತ್ಮದಲ್ಲಿರುವ ಭಗವಂತ ನಮ್ಮ ಕರೆಗೆ ಓಗೊಡುವವರೆಗೆ ಕರೆಯುತ್ತಲೇ ಹೋಗೋಣ, ಈ ಜೀವನದಲ್ಲಿ ಬೇರೇನಿದೆ? ಇದಕ್ಕಿಂತ ಹೆಚ್ಚಿನ ಕೆಲಸ ಯಾವುದಿದೆ?
0 Comments