ಬಸವಣ್ಣನವರ ಮಾತುಗಳು

- ದೇವನೊಬ್ಬ; ನಾಮ ಹಲವು.
- ಕಾಯಕವೇ ಕೈಲಾಸ.
- ದಯೆಯಿಲ್ಲದ ಧರ್ಮವಾವುದಯ್ಯ; ದಯವೇ ಬೇಕು ಸಕಲ ಪ್ರಾಣಿಗಳಿಗೆಲ್ಲ. ದಯವೇ ಧರ್ಮದ ಮೂಲವಯ್ಯ.
- ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಮುನಿಯಬೇಡ. ಅನ್ಯರಿಗೆ ಅಸಹ್ಯ ಪಡಬೇಡ. ತನ್ನ ಬಣ್ಣಿಸಬೇಡ. ಇದಿರ ಹಳಿಯಲು ಬೇಡ. ಇದೇ ಅಂತರಂಗ ಶುದ್ಧಿ; ಇದೇ ಬಹಿರಂಗ ಶುದ್ಧಿ.
- ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ತನುವ ಸಂತೈಸಿಕೊಳ್ಳಿ; ನಿಮ್ಮ ಮನದ ಸಂತೈಸಿಕೊಳ್ಳಿ.
- ದೇವರು ಸತ್ಯದ ನಿತ್ಯಾವತಾರ.
- ಅಯ್ಯಾ ಎಂದೆಡೆ ಸ್ವರ್ಗ; ಎಲವೋ ಎಂದೆಡೆ ನರಕ.
- ಪುಣ್ಯ ಪಾಪಗಳೆಂಬುದು ತಮಿಷ್ಟ ಕಂಡಿರೇ. ಅಯ್ಯಾ ಎಂದೆಡೆ ಸ್ವರ್ಗ; ಎಲವೋ ಎಂದೆಡೆ ನರಕ.
- ಬೇವಿನ ಬೀಜ ಬಿತ್ತಿ, ಬೆಲ್ಲದ ಕಟ್ಟೆಯ ಕಟ್ಟಿ, ಆಕಳ ಹಾಲನೆರೆದು, ಜೇನು ತುಪ್ಪವ ಹೊಯ್ದರೆ, ಸಿಹಿಯಾಗಬಲ್ಲದೆ, ಕಹಿಯಾಗಬಲ್ಲದೆ?
- ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು. ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು. ನುಡಿದರೆ ಲಿಂಗ ಮೆಚ್ಚಿ ಅಹುದಹುದು ಎನ್ನಬೇಕು.
- ಮಾತೆಂಬುದು ಜ್ಯೋತಿರ್ಲಿಂಗ! ಸ್ವರವೆಂಬುದು ಪರತತ್ವ. ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ; ಇಲ್ಲಿ ಸಲ್ಲುವರು ಅಲ್ಲಯೂ ಸಲ್ಲುವರಯ್ಯ; ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ.
- ದೇವಲೋಕ ಮರ್ತ್ಯಲೋಕ ಬೇರೆ ಇಲ್ಲ. ಸತ್ಯ ನುಡಿಯುವುದೇ ದೇವಲೋಕ; ವಿಥ್ಯ ನುಡಿಯುವುದೇ ಮರ್ತ್ಯಲೋಕ.
- ಆಚಾರವೇ ಸ್ವರ್ಗ; ಅನಾಚಾರವೇ ನರಕ.
- ಪರಚಿಂತೆ ನಮಗೇಕಯ್ಯ? ನಮ್ಮ ಚಿಂತೆ ನಮಗೆ ಸಾಲದೇ? ಕೂಡಲ ಸಂಗಯ್ಯ ಒಲಿದಾನೋ, ಒಲಿಯನೋ ಎಂಬ ಚಿಂತೆ ಹಾಸಲುಂಟು ಹೊದೆಯಲುಂಟು.
- ತಂದೆ ನೀನು, ತಾಯಿ ನೀನು, ಬಂಧು ನೀನು, ಬಳಗ ನೀನು. ಎನಗೆ ನೀನಲ್ಲದೆ ಮತ್ತಾರು ಅಲ್ಲವಯ್ಯ, ಕೂಡಲ ಸಂಗಮದೇವಾ, ಹಾಲಲ್ಲದ್ದು, ನೀರಲ್ಲದ್ದು.
- ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ! ಸುತ್ತಿ ಸುಳಿದು ನೋಡದಂತೆ ಅಮಧಕನ ಮಾಡಯ್ಯ ತಂದೆ! ಮತ್ತೋಂದು ಕೇಳದಂತೆ ಕಿವುಡನ ಮಾಡಯ್ಯ ತಂದೆ! ನಿಮ್ಮ ಶರಣರ ಪಾದವಲ್ಲದ ಅನ್ಯ ವಿಷಯಕೇಳಸದಂತೆ ಇರಿಸು ಕೂಡಲ ಸಂಗಮದೇವ.
- ಆಯುಷ್ಯ ತೀರಿದಲ್ಲದೆ ಮರಣವಿಲ್ಲ. ಭಾಗ್ಯ ತೀರದಲ್ಲದೆ ದಾರಿದ್ರ್ಯವಿಲ್ಲ.
- ತನುವಿನ ಕೋಪ ತನ್ನ ಹಿರಿಯತನದ ಕೇಡು; ಮನದ ಕೋಪ ತನ್ನ ಅರುಹಿನ ಕೇಡು. ಮನೆಯೊಳಗಣ ಕಿಚ್ಚು ಮನೆಯ ಸುಟ್ಟಿತಲ್ಲದೆ; ನೆರೆಮನೆ ಬೇವುದೆ?
- ಅರ್ಥರೇಖೆ ಇದ್ದಲ್ಲಿ ಫಲವೇನು? ಆಯುಷ್ಯರೇಖೆ ಇಲ್ಲದನ್ನಕ್ಕ?
- ನುಡಿದರೆ ಮುತ್ತಿನ ಹಾರದಂತಿರಬೇಕು.
- ಶೀಲವೇ ಹೊನ್ನ ಕಳಸವಯ್ಯ.
- ಮಹಾತ್ಮರಿಗೆ ಮರಣವೇ ಮಹಾನವಮಿ.
- ಸಂಸಾರವೆಂಬುದು ಗಾಳಿಯ ಸೊಡರು; ಸಿರಿಯೆಂಬುದೊಂದು ಸಂತೆಯಮಂದಿ.
- ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ.
- ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ! ಅಂಬುಜಕ್ಕೆ ಭಾನುವಿನ ಉದಯದ ಚಿಂತೆ! ಭ್ರಮರಂಗೆ ಪರಿಮಳ ಬಂಡುಂಬ ಚಿಂತೆ! ನಮಗೆ ನಮ್ಮ ಕೂಡಲ ಸಂಗಮದೇವರ ನೆನೆವುದೇ ಚಿಂತೆ.
- ಕಂಡ ಭಕ್ತರಿಗೆ ಕೈಮುಗಿವಾತನೇ ಭಕ್ತ! ಮೃದು ವಚನವೇ ಸಕಲ ಜಪಂಗಳಯ್ಯ!
- ಒಲೆ ಹತ್ತಿ ಉರಿದರೆ ನಿಲಬಹುದಲ್ಲದೆ, ಧರೆ ಹತ್ತಿ ಉರಿದರೆ ನಿಲಬಾರದು.
- ನೀನೊಲಿದರೆ ಕೊರಡು ಕೊನರುವುದಯ್ಯ, ನೀನೊಲಿದರೆ ಬರಡು ಹಯನಹುದಯ್ಯ.
- ಭಕ್ತನು ಶಾಂತನಾಗಿರಬೇಕು.
- ಮನೆ ನೋಡಾ ಬಡವರು, ಮನ ನೋಡಾ ಧೀರರು!
- ಬೆದರದಿರು, ಬೆದರದಿರು; ಬೆದಕಿದೊಡೆ ಹುರುಳಿಲ್ಲ.
- ತನು ನಿಮ್ಮದೆಂಬೆ, ಮನ ನಿಮ್ಮದೆಂಬೆ, ಧನ ನಿಮ್ಮದೆಂಬೆ.
- ಎನ್ನ ತಪ್ಪು, ಅನಂತಕೋಟಿ, ನಿಮ್ಮಸೈರಣೆ ಲೆಕ್ಕವಿಲ್ಲ.
- ಈ ಕೈಯ್ಯಲೆ ಸುಖವು; ಈ ಕೈಯ್ಯಲೇ ದುಃಖವು!
- ಸುಖ ಬಂದರೆ ಪುಣ್ಯದ ಫಲವೆನ್ನು, ದುಃಖ ಬಂದರೆ ಪಾಪದ ಫಲವೆನ್ನು!
- ಎಡದ ಕೈಯಲ್ಲಿ ಹಾಲ ಬಟ್ಟಲು, ಬಲದ ಕೈಯಲ್ಲಿ ಓಜುಗಟ್ಟಿಗೆ! ಅವಾಗ ಬಂದಾನೆಮ್ಮಯ್ಯ, ಬಡಿದು ಹಾಲು ಕುಡಿಸುವ ತಂದೆ!?
0 Comments