ನಿಮ್ಮಲ್ಲಿ ಸಾಸುವೆ ಕಾಳಿನಷ್ಟು ಆತ್ಮವಿಶ್ವಾಸವಿದ್ದರೂ ಸಾಕು; ನಿಮಗೆ ಯಾವ ಕೆಲಸವೂ ಕಷ್ಟ ಅಲ್ಲ.
ವೊದಲು ನಿನ್ನಲ್ಲಿರುವ ತಪ್ಪುಗಳನ್ನು ನೀನು ತಿದ್ದಿಕೋ; ಅನಂತರ ಇತರರ ತಪ್ಪುಗಳನ್ನು ತಿದ್ದುವುದು ನಿನಗೆ ಗೊತ್ತಾಗುತ್ತದೆ.
ಇತರರು ನಿನ್ನನ್ನು ಹೇಗೆ ನಡೆಸಿಕೊಳಬೇಕೆಂದು ನೀನು ಬಯಸುತ್ತೀಯೋ ಹಾಗೆಯೇ ಇತರರನ್ನು ನೀನು ನಡೆಸಿಕೋ.
ಬೈದರೆ ಬೈದವರ ಬಾಯಿ ನೋಯುವುದು; ಅದರಿಂದ ಇತರರಿಗೆ ಏನಾಗುವುದು?
ಕಣ್ಣಿನಲ್ಲಿ ಹೆಮ್ಮೆ ಬೇಡ, ನಾಲಿಗೆಯಲ್ಲಿ ಸುಳ್ಳುಬೇಡ ಕೈ ಕೊಳೆಯಾಗದೆರಲಿ, ಮನಸ್ಸು ಕಟ್ಟದನ್ನು ಯೋಚಿಸದಿರಲಿ. ಕಾಲು ಕೆಡಕಿನತ್ತ ಹೋಗದಿರಲಿ, ಬಾಯಿ ಸುಳ್ಳು ಹೇಳದಿರಲಿ, ದೇಹ ದೇವನಿಗೆ ಸಲ್ಲಲಿ.
ಇತರರ ಕಷ್ಟವನ್ನು ನೋಡಿ ನಗುವುದಕ್ಕೆ ಕಣ್ಣು ನನಗಿರದಿರಲಿ. ಇತರರನ್ನು ನಿಂದಿಸುವ ನಾಲಿಗೆಯು ನನಗಿರದಿರಲಿ. ಇತರರ ಬಗ್ಗೆ ಕೆಟ್ಟದನ್ನು ಕೇಳುವ ಕಿವಿ ನನಗಿರದಿರಲಿ. ಇತರರದನ್ನು ಅಪಹರಿಸುವ ಕೈಗಳು ನನಗಿರದಿರಲಿ.
ಕಣ್ಣು ದೇಹದ ದೀಪ; ನಿನ್ನ ಕಣ್ಣು ನೆಟ್ಟಗಿದ್ದರೆ ನಿನ್ನ ಇಡೀ ದೇಹ ಬಳಕಿನಿಂದ ತುಂಬಿರುತ್ತದೆ. ನಿನ್ನ ಕಣ್ಣು ಕೆಟ್ಟಿದ್ದರೆ ನಿನ್ನ ಇಡೀ ದೇಹ ಕತ್ತಲಲ್ಲಿ ಮುಳುಗಿರುತ್ತದೆ.
ಬೇಡು; ಬೇಡಿದ್ದು ನಿನಗೆ ದೊರೆಯುತ್ತದೆ ಹುಡುಕು; ಹುಡುಕಿದ್ದು ನಿನಗೆ ದೊರೆಯುತ್ತದೆ. ತಟ್ಟು ನೀ ತಟ್ಟುವ ಬಾಗಿಲು ನಿನಗೆ ತೆರೆಯುತ್ತದೆ.
ನಾಶದ ದಾರಿ ದೊಡ್ಡದಾಗಿದೆ ಮತ್ತು ಬಹುಪಾಲು ಜನರು ಆ ದಾರಿಯಲ್ಲಿ ನಡೆಯುತ್ತಾರೆ. ಆದ್ದರಿಂದ ನೀನು ಇಕ್ಕಟ್ಟಾದ ಬಾಗಿಲನ್ನು ಪ್ರವೇಶಿಸು. ಏಕೆಂದರೆ ನಿಜವಾದ ಬದುಕಿನ ದಾರಿ ಕಠಿಣ ಮತ್ತು ಅದಕ್ಕೆ ಹೋಗುವ ಬಾಗಿಲು ಇಕ್ಕಟ್ಟಾದದ್ದು; ಕೆಲವರು ಮಾತ್ರ ಅಲ್ಲಿ ನಡೆಯುತ್ತಾರೆ.
ಮುಳ್ಳು ಗಿಡಗಳಿಂದ ದ್ರಾಕ್ಷಿಯನ್ನಾಗಲಿ, ಅಂಜೂರವನ್ನಾಗಲಿ ಪಡೆಯಲು ಸಾಧ್ಯವೆ? ಹಾಗೆಯೇ ಒಳ್ಳೆಯ ಮರದಿಂದ ಒಳ್ಳೆಯ ಹಣ್ಣೂ, ಕೆಟ್ಟ ಮರದಿಂದ ಕೆಟ್ಟ ಹಣ್ಣೂ ದೊರೆಯುತ್ತದೆ.
ಯಾರು ಕ್ಷೀಣ ಚೈತನ್ಯರೋ ಅವರು ಧನ್ಯರು, ಯಾಕೆಂದರೆ ಅವರದು ಈ ದೇವರ ರಾಜ.
ಯಾರು ದುಃಖಿಗಳೋ ಅವರು ಧನ್ಯರು, ಯಾಕೆಂದರೆ ಅವರಿಗೆ ಸಮಾಧಾನ ದೊರೆಯುತ್ತದೆ.
ಯಾರು ದೀನರೋ ಅವರು ಧನ್ಯರು, ಯಾಕೆಂದರೆ ಅವರು ಈ ನೆಲದ ಒಡೆತನವನ್ನು ಪಡೆಯುತ್ತಾರೆ.
ಯಾರು ಋಜುತ್ವಕ್ಕಾಗಿ ಹಸಿದು ಬಾಯಾರಿದ್ದಾರೆಯೋ ಅವರು ಧನ್ಯರು, ಯಾಕೆಂದರೆ ಅವರು ತೃಪ್ತಿಯನ್ನು ಹೊಂದುತ್ತಾರೆ.
ಯಾರು ದಯವುಳ್ಳವರೋ ಅವರು ಧನ್ಯರು, ಯಾಕೆಂದರೆ ಅವರು ಕರುಣೆಯನ್ನು ಹೊಂದಿರುತ್ತಾರೆ.
ಯಾರು ಶುದ್ಧ ಹೃದಯರೋ ಅವರು ಧನ್ಯರು, ಯಾಕೆಂದರೆ ಅವರು ದೇವರನ್ನು ಕಾಣುತ್ತಾರೆ.
ಯಾರು ಶಾಂತಿದೂತರೋ ಅವರು ಧನ್ಯರು, ಯಾಕೆಂದರೆ ಅವರು ದೇವರ ಮಕ್ಕಳೆಂದು ಕರೆಯಲ್ಪಡುತ್ತಾರೆ.
ಯಾರು ಸತ್ಯಕ್ಕಾಗಿ ಹಿಂಸೆಗೆ ಒಳಗಾಗುತ್ತರೋ ಅವರು ಧನ್ಯರು, ಯಾಕೆಂದರೆ ಅವರದು ಈ ಸ್ವರ್ಗದ ರಾಜ್ಯ.
0 Comments