ಪ್ರಜಾ ಪ್ರಭುತ್ವದಲ್ಲಿ ಬಲಿಷ್ಠನಿಗಿರುವ ಅವಕಾಶಗಳು ದುರ್ಬಲನಿಗೂ ಇರಬೇಕು. ಅದೇ ನಿಜವಾದ ಪ್ರಜಾಪ್ರಭುತ್ವ.
ಹಿಂದೂ ಧರ್ಮ ಗಂಗೆಯಂತೆ, ಮೂಲದಲ್ಲಿ ಅದು ಪರಿ ಶುದ್ದ ಮತ್ತು ಆಕಳಕಿಂತ ಆದರೆ ಮುನ್ನಡೆಯುವಾಗ ತನ್ನ ದಾರಿಯಲ್ಲಿನ ಆಶುದ್ಧವನ್ನೆಲ್ಲಾ ತನ್ನೊಳಕ್ಕೆ ಎಳೆದು ಕೊಳ್ಳುತ್ತದೆ, ಆದರೆ ಒಟ್ಟು ಪರಿಣಾಮದಲ್ಲಿ ಅದು ಗಂಗೆಯಂತೆಯೇ ಉಪಕಾರಿ.
ದುಃಖ ಎನ್ನುವುದು ತ್ಯಾಗ ಅಲ್ಲ, ಯಾವ ತ್ಯಾಗದಿಂದ ಮನುಷ್ಯನಿಗೆ ಆನಂದ ಲಭಿಸುತ್ತದೆಯೊ ಅದೇ ನಿಜವಾದ ತ್ಯಾಗ.
ಮನುಷ್ಯ ಎಷ್ಟರ ಮಟ್ಟಿಗೆ ಇತರರ ಒಳ್ಳೆಯದಕ್ಕೆ ದುಡಿಯತ್ತಾನೆಯೊ ಅಷ್ಟರಮಟ್ಟಿಗೆ ಅವನು ದೊಡ್ಡವನಾಗುತ್ತಾನೆ.
ಮಕ್ಕಳು, ಯುವಕರು ಮತ್ತು ಮಹಿಳೆಯರು, ಎಲ್ಲರೂ ಸರಿಸಮಾನವಾಗಿ ಬೆಳೆಸಿಕೊಳ್ಳಬಹುದಾದ ಶಕ್ತಿ ಅಂದರೆ ಅಹಿಂಸೆ.
ನೀನೇನು ಕೂಡಬಲ್ಲೆ ಎನ್ನುವುದರ ಮೇಲೆ ನಿನ್ನ ಸುಖ ನಿಂತಿದೆಯೇ ಹೊರತು ನೀನೇನು ತೆಗೆದುಕೊಳ್ಳಬಲ್ಲೆ ಎನ್ನುವುದರ ಮೆಲಲ್ಲ.
ವ್ಯಕ್ತಿಯಲ್ಲಿರುವ ಉತ್ತಮ ಅಂಶವನ್ನು ಬೆಳಕಿಗೆ ತರುವುದೇ ನಿಜವಾದ ಶಿಕ್ಷಣ. ಮಾನವತ್ವದ ಪುಸ್ತಕಕ್ಕಿಂತ ಉತ್ತಮ ಪುಸ್ತಕ ಯಾವುದಿದೆ?
ಧರ್ಮ ಇಲ್ಲದ ಮನುಷ್ಯ ಚುಕ್ಕಾಣಿ ಇಲ್ಲದ ಹಡಗಿನಂತೆ.
ಇಡೀ ಜೀವನ ತುದಿಗಾಣದ ಒಂದು ಪ್ರಯೋಗಶಾಲೆ.
ಭಾರತದಲ್ಲಿ ಉಚಿತ ಕಡ್ಡಾಯ ಪ್ರಾಥಮಿಕ ಶಿಕ್ಷಣ ಜಾರಿಗೆ ಬರಬೇಕು. ಈ ಗುರಿಯನ್ನು ಸಾಧಿಸಲು ಮಕ್ಕಳು ಮನಸ್ಸು, ಶರೀರ, ಮತ್ತು ಆತ್ಮಶಕ್ತಿಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುವ, ಉಪಯುಕ್ತ ಉದ್ಯೋಗವನ್ನು ಅವರಿಗೆ ಕಲಿಸಬೇಕು.
ಪರಭಾಷೆಯ ಶಿಕ್ಷಣ ಮಾಧ್ಯಮ ನಮ್ಮ ಮಕ್ಕಳನ್ನು ಅವರದೇ ಅದ ಭೂಮಿಯಲ್ಲಿ ಪರದೇಶಿಗಳನ್ನಾಗಿ ಮಾಡಿದೆ.
ಕಷ್ಟದ ಜೀವನವೇ ಶಿಸ್ತನ್ನು ಕಲಿಸುವ ಶಾಲೆ.
ತಾಳ್ಮೆ, ಕ್ಷಮೆ, ದಯೆ, ಔದರ್ಯ, ಪ್ರೇಮ ಇವು ಕ್ಚಾತ್ರಗುಣದ ಪೋಷಕ ಶಕ್ತಿಗಳು.
ಕೆಟ್ಟದ್ದನ್ನು ಮಾಡದಿರಬೇಕಾದರೆ, ಕೆಟ್ಟದ್ದರಿಂದ ಪೂರ್ಣವಾಗಿ ದೂರ ಇರಬೇಕು.
ಅಹಿಂಸೆ ಹೇಡಿತನವಲ್ಲ. ಆತ್ಮ ಧೈರ್ಯದ ಪ್ರತೀಕ, ಆದರೆ ಅಹಿಂಸೆಯಿಂದ ಗುರಿ ಮುಟ್ಟಬೇಕಾದರೆ ತಾಳ್ಮೆ ಅಗತ್ಯ.
ಧರ್ಮಧರ್ಮಗಳ ಮಧ್ಯೆ ಜಗಳವಿರದು, ಅದರೆ ಎಲ್ಲ ಧರ್ಮಗಳೂ ಅಧರ್ಮದ ವಿರುದ್ಧ ಹೋರಾಡಬೇಕು.
ತನಗೆ ಅಗತ್ಯವಿದ್ದಷ್ಟನ್ನು ಮಾತ್ರ ಪಡೆಯುವುದು ಧರ್ಮ, ಅಗತ್ಯಕ್ಕಿಂತ ಹೆಚ್ಚಾಗಿ ಪಡೆದರೆ ಕಳ್ಳತನಮಾಡಿದಂತೆಯೇ.
0 Comments