Input license here

ಇತ್ತೀಚಿನ ಪೋಸ್ಟ್‌ಗಳು

ನನ್ನ ಇನಿಯನ ನೆಲೆಯ ಬಲ್ಲೆ ಏನೆ

 ನನ್ನ ಇನಿಯನ ನೆಲೆಯ ಬಲ್ಲೆ ಏನೆ
ಹೇಗೆ ತಿಳಿಯಲಿ ಅದನು ಹೇಳೆ ನೀನೆ

ಇರುವೆ ಸರಿಯುವ ಸದ್ದು
ಮೊಗ್ಗು ಬಿರಿಯುವ ಸದ್ದು
ಮಂಜು ಇಳಿಯುವ ಸದ್ದು ಕೇಳುವ ನಲ್ಲ ||೨||
ನನ್ನ ಮೊರೆಯನು ಏಕೆ ಕೇಳಲೊಲ್ಲ

ಗಿರಿಯ ಎತ್ತಲು ಬಲ್ಲ
ಶರದಿ ಬಗ್ಗಿಸ ಬಲ್ಲ
ಗಾಳಿ ಉಸಿರನೆ ಕಟ್ಟಿ ನಿಲ್ಲಿಸಬಲ್ಲ ||೨||
ನನ್ನ ಸೆರೆಯನು ಏಕೆ ಬಿಡಿಸಲೊಲ್ಲ

ನೀರು ಮುಗಿಲಾದವನು
ಮುಗಿಲು ಮಳೆಯಾದವನು
ಮಳೆಬಿತ್ತು ತೆನೆಯತ್ತು ತೂಗುವವನ ||೨||
ನಲ್ಲೆ ಅಳಲನು ಏಕೆ ತಿಳಿಯನವನು

-ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ.

Post a Comment

0 Comments