ಕುರುಕುಲದ ಹಿರಿಯರೇ
ಇದೆ ನಿಮ್ಮ ಕುಲ ಚರಿತೆಯೇ
ಮಹಾಮಹಿಮ ಗುರುಗಳೇ
ಇದು ನಿಮ್ಮ ಸಂಸ್ಕಾರವೇ
ಸಭ್ಯತೆಯ ಸೀರೆಯನು
ಸೆಳೆವಾಗ ದುರುಳರು
ತಲೆ ಬಾಗಿ ಕುಳಿತವರು
ಪುರುಷಪುಂಗವರೇ
ನೀನೆಲ್ಲಿ ಪುರುಷೋತ್ತಮ
ನೀನೆಲ್ಲಿ ಪುರುಷೋತ್ತಮ
ಎಲ್ಲಿರುವೆ ಹರಿಯೇ ದ್ವಾರಕೆಯ ದೊರೆಯೇ
ಈ ಅಬಲೆ ಮೊರೆ ಕೇಳಿ ಬರಬಾರದೆ
ಅಪವಾದವಿದೆಯೇ ಅಪಮಾನ ಸರಿಯೆ
ಸೋದರಿಯ ಗತಿ ನೋಡಿ ದಯೆ ಬಾರದೆ
ಧರ್ಮೇಚ ಅರ್ಥೇಚ ಕಾಮೇಚ ಮೋಕ್ಷೇಚ
ಎಂದು ಕೈ ಹಿಡಿದವರು ತಲೆಬಾಗಿ ಕುಂತಿಹರು
ದಹಿಸುತಿದೆ ಧರ್ಮ
ಕರುಣಾಕರ ನೀನಲ್ಲವೇ
ಕಾರುಣ್ಯವು ನಿನಗಿಲ್ಲವೇ
ಸೆರಗೊಡ್ಡಿ ಬೇಡಿದರು ಕರವೊಡ್ಡಿ ಕೂಗಿದರು
ಕೇಳಿಸದೆ ಕಾಣಿಸದೆ ರಕ್ಷಿಸದೆ ಎಲ್ಲಿರುವೆ
ಕೃಷ್ಣಾ…..
ಸೊಕ್ಕೇರಿ ಮೆರೆದವರ ಮುಕುಟಗಳು ಉರುಳಿ
ಮಣ್ಣಲ್ಲಿ ಮಣ್ಣಾಗಿ ಮರೆಯಾಗಲಿ
ನನ್ನ ಶಾಪಾಗ್ನಿಯು…
ಮನುಜತ್ವ ಮರೆತವರು ಮತಿಭ್ರಮಣೆಗೊಂಡು
ಮೃತ್ಯುವಿನ ಮಡಿಲಲ್ಲಿ ಚಿರವಾಗಲಿ
ನನ್ನ ಶಪತಾಗ್ನಿಯು…
ಪತಿವ್ರತೆಯ ಶಾಪವಿದು ಕಾಡುವುದು ಪ್ರತಿಕ್ಷಣವೂ
ಕುರುವಂಶ ನಿರ್ವಂಶ ಆಗುವುದು ನಿಶ್ಚಿತವು
ಶ್ರೀ ಕೃಷ್ಣ ಆಣೆಗೂ…
ಯದು ನಂದನ ಬರಲಾರೆಯಾ
ಸಂರಕ್ಷೆಯ ಕೊಡಲಾರೆಯ
ತನು ಮನವ ಅರ್ಪಿಸಿದೆ
ನಿನ್ನ ನಾಮ ಅರ್ಚಿಸಿದೆ
ಕೇಳಿಸದೆ ಕಾಣಿಸದೆ ರಕ್ಷಿಸದೆ ಎಲ್ಲಿರುವೆ
ಕೃಷ್ಣಾ…..
Watch YouTube video
0 Comments